ತಿರುವನಂತಪುರಂ: ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಭಾಗವಾಗಿ ದೇಶದ ದತ್ತಾಂಶ ಸಂಪನ್ಮೂಲವನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಲ್ಲಿನ ಟೆಕ್ನೊ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಾಂಶ ಸುರಕ್ಷತೆಯ ಬಗ್ಗೆ ಅವರು ಮಾತನಾಡಿದರು.
'ಒಬ್ಬರ ಬಳಿ ಮಾತುಕತೆಗೆ ಹೋಗುವ ಮುನ್ನ ಅವರ ಬಳಿ ಏನಿದೆ ಎಂದು ತಿಳಿದುಕೊಂಡಿರಬೇಕು. ಭಾರತದ ದತ್ತಾಂಶ ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಎನ್ನುವುದನ್ನು ತಿಳಿದುಕೊಂಡಿದ್ದರೆ, ನಮಗೆ ಕೃಷಿಯ ಮೇಲೆ ಯಾವುದೇ ತೆರಿಗೆ ಇರುತ್ತಿರಲಿಲ್ಲ' ಎಂದರು.

