HEALTH TIPS

'ಇರಾನ್ ಸಂಧಾನ' ದ ಬಗ್ಗೆ ಜೋಕ್ ಮಾಡಿದ ಬೊಮನ್ ಇರಾನಿ; ಖಾರವಾಗಿ ಉತ್ತರಿಸಿದ ಇರಾನಿ ಮೂಲದ ನಟಿ

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಶ್ಚಿಮ ಏಷ್ಯಾದ ಉದ್ವಿಗ್ನತೆ ನಡುವೆ ಇರಾನಿಗಳ ಜೊತೆಗೆ ಶಾಂತಿ ಮಾತುಕತೆ ನಡೆಸಲು ಆಸಕ್ತಿ ತೋರಿಸಿದ್ದಾರೆ ಎಂಬ ಸುದ್ದಿ ಆಧರಿಸಿ, ಬಾಲಿವುಡ್ ನಟ ಬೊಮನ್ ಇರಾನಿ ಮಾಡಿರುವ ತಮಾಷೆಗೆ ಇರಾನ್ ಮೂಲದ ನಟಿ ಮಂದಾನಾ ಕರಿಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿನ ಸಂಘರ್ಷ ಮತ್ತು ಇಂಧನ ಪೂರೈಕೆಯಲ್ಲಿನ ಅಸ್ತವ್ಯಸ್ತತೆ ಕುರಿತು ಬೊಮನ್ ಇರಾನಿ ತಮಾಷೆ ಮಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ಗಂಭೀರವಾದ ಮುಖಭಾವ ತೋರಿಸಿದ ಬೊಮನ್ ಇರಾನಿ, "ಮಿಸ್ಟರ್ ಡೊನಾಲ್ಡ್ ಟ್ರಂಪ್ ಅವರು ಇರಾನಿಗಳ ಜೊತೆಗೆ ಮಾತನಾಡಲು ಬಯಸಿದ್ದಾರೆ ಎಂದು ಕೇಳಿ ಸಂತೋಷವಾಗಿದೆ. ಟ್ರಂಪ್ ಅವರೊಂದಿಗೆ ಶಾಂತಿ ಮಾತುಕತೆ ನಡೆಸಲು ಭಾರತದ ಮೂವರು ಇರಾನಿಗಳು ಸಿದ್ಧರಿದ್ದಾರೆ. ನಾನು, ಸ್ಮೃತಿ ಇರಾನಿ, ಅರುಣಾ ಇರಾನಿ ಅವರು ಟ್ರಂಪ್ ಜೊತೆಗೆ ಸಂಧಾನಕ್ಕೆ ಸಿದ್ಧವಿದ್ದೇವೆ. ಶಾಂತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ನಮ್ಮ ಮೂವರ ತಂಡ ಟ್ರಂಪ್ ಸಾಹೇಬರ ಜೊತೆಗೆ ಸಂಧಾನಕ್ಕೆ ಸಿದ್ಧವಾಗಿದೆ. ಆದರೆ ಮಾತುಕತೆಗಾಗಿ ನಾವು ವಾಷಿಂಗ್ಟನ್ ಡಿಸಿಗೆ ಬರುವುದಿಲ್ಲ. ನಿಮ್ಮ ನಿಯೋಗದೊಂದಿಗೆ ಮುಂಬೈನ ದಾದರ್ ಪಾರ್ಸಿ ಕಾಲನಿಗೆ ಬನ್ನಿ. ಅಲ್ಲಿ ಮಾತುಕತೆ ಮಾಡೋಣ. ಬರುವಾಗ ಖಾಲಿ ಕೈಯಲ್ಲಿ ಬರಬೇಡಿ; ದೊಡ್ಡ ಗ್ಯಾಸ್ ಸಿಲಿಂಡರ್ ತಂದರೆ ಅನುಕೂಲ" ಎಂದು ಹೇಳಿದ್ದರು.

ಇದಲ್ಲದೆ, ಟ್ರಂಪ್ ಅವರಿಗೆ ಪಾರ್ಸಿ ಸಂಸ್ಕೃತಿಯ ಪ್ರಸಿದ್ಧ ಖಾದ್ಯಗಳಾದ ಧನ್ಸಾಕ್ ಮತ್ತು ಕಸ್ಟರ್ಡ್ ಊಟದ ಆಮಿಷವನ್ನೂ ಒಡ್ಡಿದ್ದಾರೆ.

ಈ ಪೋಸ್ಟ್‌ ಗೆ ನಟ ಫರ್ಹಾನ್ ಅಖ್ತರ್, ನಟ ಸಿದ್ಧಾರ್ಥ್, ಗಾಯಕ ರಿಕಿ ಕೇಜ್ ಮತ್ತು ನಟಿ ಸಮೀರಾ ರೆಡ್ಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇರಾನ್ ಮೂಲದ ನಟಿ ಮಂದಾನಾ ಕರಿಮಿ ಈ ಪೋಸ್ಟ್‌ ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೊಮನ್ ಇರಾನಿ ಅವರ ವೀಡಿಯೋಗೆ ಕಾಮೆಂಟ್ ಮಾಡಿರುವ ಮಂದಾನಾ, "ಬೊಮನ್ ಇರಾನಿ ಸರ್, ಇದಕ್ಕಿದ್ದಂತೆ ನೀವು ಇರಾನ್ ಬಗ್ಗೆ ಹೇಳಲು ಬಹಳಷ್ಟು ಇದೆ. ಆಸಕ್ತಿದಾಯಕ ಸಮಯ. ವರ್ಷಗಳಿಂದ ಇರಾನಿಯರನ್ನು ಬಂಧಿಸಲಾಗುತ್ತಿದೆ, ಗಲ್ಲಿಗೇರಿಸಲಾಗುತ್ತಿದೆ ಮತ್ತು ಮೌನಗೊಳಿಸಲಾಗುತ್ತಿದೆ. ಸಾವಿರಾರು ಜನರನ್ನು ಕೊಲ್ಲಲಾಗಿದೆ ಮತ್ತು ಕುಟುಂಬಗಳು ಹರಿದು ಹೋಗಿವೆ. ನನ್ನಂತಹ ಜನರು ಇವುಗಳಿಗೆ ಸಾಕ್ಷಿಯಾಗಿ ಬದುಕಿದ್ದೇವೆ. ನಾವು ಅದರ ಬಗ್ಗೆ ಮಾತನಾಡಿದ್ದೇವೆ" ಎಂದು ಹೇಳಿದ್ದಾರೆ.

ಮುಂದುವರಿದು, "ಈಗ ವೀಡಿಯೋ ಮಾಡಿದ್ದೀರಿ. ಕಾಳಜಿ ತೋರಿಸುತ್ತಿದ್ದೀರಿ. ಈ ಅನಿಲದ ಬಗ್ಗೆ, ಟ್ರಂಪ್ ಬಗ್ಗೆ ಮತ್ತು 'ನನ್ನ ಮನೆಗೆ ಬನ್ನಿ' ಎಂದು ಹಾಸ್ಯ ಮಾಡುತ್ತಿದ್ದೀರಿ. ಗೌರವದಿಂದ ಹೇಳಬೇಕೆಂದರೆ ನೀವು ಮತ್ತು ಪಾರ್ಸಿ ಸಮುದಾಯ ಇರಾನ್ ಮೂಲದವರು. ಇತಿಹಾಸವೇ ಬೆಂಕಿಯಂತಿದೆ. ಹಾಗಿದ್ದರೂ ಇರಾನಿಯರು ಸಾಯುತ್ತಿದ್ದಾಗ ಈ ಧ್ವನಿ ಎಲ್ಲಿತ್ತು? ಈಗ ಇದಕ್ಕಿದ್ದಂತೆ ಬರುತ್ತಿದೆ ಏಕೆ! ಅನಿಲ, ರಾಜಕೀಯ, ಜಾಗತಿಕ ಮಾತುಕತೆ ಬಗ್ಗೆ ಮಾತನಾಡುತ್ತಿದ್ದೀರಿ" ಎಂದು ಖಾರವಾಗಿ ಉತ್ತರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries