HEALTH TIPS

ಎಡನೀರು ಮಠದಲ್ಲಿ ಭರತಮುನಿ ಜಯಂತಿ: ಗುರುಕುಲ ಪದ್ಧತಿಯಿಂದ ಭಾರತೀಯ ಸಂಸ್ಕøತಿ ಭದ್ರ - ಎಡನೀರು ಶ್ರೀ

ಬದಿಯಡ್ಕ: ರಂಗಭೂಮಿ ಕಲೆಗಳಾದ ಯಕ್ಷಗಾನ, ಭರತನಾಟ್ಯ, ನಾಟಕ ಮೊದಲಾದವುಗಳಿಗೆ ಪರಿಗಣಿಸಲ್ಪಟ್ಟ ನಾಟ್ಯಶಾಸ್ತ್ರದ ಪಿತಾಮಹ ಭರತಮುನಿ ನಾಟ್ಯಶಾಸ್ತ್ರಕ್ಕೆ ಒಂದು ಆಯಾಮವನ್ನು ಕೊಟ್ಟವರು. ಕೃಷಿ ಹಾಗೂ ಋಷಿ ಸಂಸ್ಕøತಿಯ ಮೂಲಕ ಭಾರತವು ಸುಭದ್ರವಾಗಿದೆ. ಪರಂಪರೆಯ ಸಂಸ್ಕøತಿ ಮುಂದುವರಿಯುತ್ತಾ ಭಾರತದಲ್ಲಿ ಗಟ್ಟಿಯಾಗಿ ಇಲ್ಲಿನ ಕಲೆಗಳು ಬೆಳಗುತ್ತಿದೆ. ಆಚರಣೆಗಳ ಮೂಲಕ ಯುವ ಸಮಾಜಕ್ಕೆ ಕ್ಷೇತ್ರ ಕಲೆಗಳನ್ನು, ಋಷಿಪರಂಪರೆಯನ್ನು ಪರಿಚಯಿಸುತ್ತಿರುವುದು ಅಭಿನಂದನೀಯ. ಗುರುಕುಲ ಪದ್ಧತಿಯಿಂದ ಭಾರತೀಯ ಸಂಸ್ಕøತಿ ಉಳಿಯುತ್ತದೆ ಎಂದು ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು. 


ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಶಾಸ್ತ್ರೀಯ ನೃತ್ಯ ಕಲಾವಿದರ ಸಂಘಟನೆ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಮಂಗಳೂರು ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಎಡನೀರು ಮಠದ ಭಾರತೀ ಕಲಾಸದನದಲ್ಲಿ ಭಾನುವಾರ ಜರಗಿದ ಭರತಮುನಿ ಜಯಂತಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನವನ್ನು ನೀಡಿದರು. 

ಕಲೆಗಳ ವಿನಿಮಯ ಕಲಾವಿದರೊಳಗೆ ಆಗಬೇಕು. ಕಲಾವಿದರೊಳಗೆ ಸೌಹಾರ್ಧತೆ ಸಂಬಂಧಗಳನ್ನು ಬೆಳೆಸುವುದಲ್ಲದೆ ಕಲೆ ಮತ್ತು ಪ್ರೇಕ್ಷಕರ ಮಧ್ಯೆ ಸಂವಹನವನ್ನು ಗಟ್ಟಿಗೊಳಿಸಬೇಕು. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಇಂತಹ ಸಂಘಟನೆಗಳು ಮುಂದುವರಿಯಬೇಕು ಎಂದರು. 

ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಅಧ್ಯಕ್ಷೆ ವಿದುಷಿ ರಾಜಶ್ರೀ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಸಂಘಟಕ ಕೆರೆಮನೆ ಶಿವಾನಂದ ಹೆಗಡೆ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ನಾಟ್ಯರಂಗ ಪುತ್ತೂರು ಕಲಾನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ನುಡಿನಮನ ಸಲ್ಲಿಸಿದರು. ಹಿರಿಯ ಕಲಾವಿದೆ ಕಾಸರಗೋಡು ನೃತ್ಯನಿಕೇತನದ ನಿರ್ದೇಶಕಿ, ನೃತ್ಯಗುರು ವಿದುಷಿ ಶಶಿಕಲಾ ಟೀಚರ್ ಅವರಿಗೆ ಗೌರವ ಸನ್ಮಾನ ನಡೆಯಿತು. ಬೆಳಗ್ಗೆ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು, ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪುತ್ತೂರು, ವಿದುಷಿ ಕಾವ್ಯ ಭಟ್ ಪೆರ್ಲ, ವಿದುಷಿ ಸವಿತಾ ಜೀವನ್ ಕೊಂಡೆವೂರು ಉಪ್ಪಳ, ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಇವರ ನಿರ್ದೇಶನದಲ್ಲಿ ನಾಟ್ಯಾರ್ಚನೆ-ಸಮೂಹ ನೃತ್ಯ ಪ್ರದರ್ಶನಗೊಳ್ಳಲಿದೆ. ಅಪರಾಹ್ನ ಡಾ. ಸತ್ಯನಾರಾಯಣ ರಾಜು ಇವರ ಶಿಷ್ಯೆ ವಿದುಷಿ ಗೌರಿ ಸಾಗರ್ ಬೆಂಗಳೂರು ಇವರಿಂದ ಭರತನಾಟ್ಯ ಪ್ರಸ್ತುತಿ ಶ್ರೀ ವಿನೋದ,  `ಕುಚೇಲ ವ್ರತಂ' ಕಥಕ್ಕಳಿ ಪ್ರದರ್ಶನ ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಬೇಕಲ ಕಾಸರಗೋಡು ಇವರ ಸಂಯೋಜನೆಯಲ್ಲಿ ವಿದುಷಿ ಮೃದುಲಾ ಹರೀಶ್ ಇವರ ಸಹಪ್ರಾಯೋಜಕತ್ವದಲ್ಲಿ ನಡೆಯಿತು. ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ನಿಕಟಪೂರ್ವ ಅಧ್ಯಕ್ಷ ವಿದ್ವಾನ್ ಯು.ಕೆ.ಪ್ರವೀಣ್, ಸುದರ್ಶನ್, ಶ್ರೀಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು. ಶ್ರೀಧರ ಹೊಳ್ಳ ನಿರೂಪಿಸಿದರು. ಕು. ಆತ್ಮಶ್ರೀ ಪ್ರಾರ್ಥನೆ ಮಾಡಿದರು. ಉಪಾಧ್ಯಕ್ಷ ವಿದ್ವಾನ್ ಚಂದ್ರಶೇಖರ ನಾವಡ ಸ್ವಾಗತಿಸಿ, ಕಾರ್ಯದರ್ಶಿ ವಿದುಷಿ ಶಾರದಾ ಮಣಿಶೇಖರ್ ವಂದಿಸಿದರು.


ನಾಟ್ಯಶಾಸ್ತ್ರಗಳ ಪಿತಾಮಹ ಭರತಮುನಿ :

ದಕ್ಷಿಣ ಏಷ್ಯಾದಲ್ಲಿಯೇ ಪರಸ್ಪರ ಹೋಲಿಕೆಗಳಿರುವ ಶಾಸ್ತ್ರೀಯ ಕಲೆಗಳಿವೆ. ಭಾರತೀಯ ಶಾಸ್ತ್ರಗಳನ್ನು ನಾವು ಎಂದೂ ಮರೆಯಬಾರದು. ನಾಟ್ಯ ಶಾಸ್ತ್ರಗಳ ಪಿತಾಮಹ ಭರತಮುನಿ. ಕಲೆಯ ಬಗ್ಗೆ ನಮ್ಮ ನೋವು, ಯೋಚನೆಗಳನ್ನು, ಸಂಕಷ್ಟಗಳನ್ನು ಹೇಳುವುದಕ್ಕಿರುವ ಪೀಠ ನಮ್ಮಲ್ಲಿದೆ ಎಂಬ ಭಾವನೆಯಿದೆ. ಕಲಾವಿದರು ಪರಸ್ಪರ ಬೇಧವನ್ನು ಮರೆಯಬೇಕು. ಯಕ್ಷಗಾನದ ಎಲ್ಲ ವಿಭಾಗವನ್ನು ಸಂಗಮಿಸಿದ ಕ್ಷೇತ್ರ ಶ್ರೀ ಎಡನೀರುಮಠ. 

- ಕೆರೆಮನೆ ಶಿವಾನಂದ ಹೆಗಡೆ, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries