HEALTH TIPS

ಚುಕ್ಕಿನಡ್ಕದ ಷಣ್ಮುಖ ಕ್ಲಬ್ಬಿನ ಸಮವಸ್ತ್ರ ಬಿಡುಗಡೆ: ಸಮವಸ್ತ್ರದೊಳಗಿರುವ ಸಮಾನ ಮನಸ್ಸು ಹಾಗೂ ಒಗ್ಗಟ್ಟಿನ ದುಡಿಮೆ ನಾಡಿನ ಅಭಿವೃದ್ಧಿಗೆ ಧ್ಯೋತಕವಾಗಿರಲಿ : ಬ್ಲಾಕ್ ಪಂ.ಸದಸ್ಯ ಮಹೇಶ್ ವಳಕುಂಜ

ಬದಿಯಡ್ಕ : ಯುವಕರ ಸೃಜನಾತ್ಮಕತೆ ಹಾಗೂ ಉತ್ಸಾಹವು ನಾಡಿನ ಅಭಿವೃದ್ಧಿಗೆ ಅತಿ ಅಗತ್ಯ ಈ ನಿಟ್ಟಿನಲ್ಲಿ ಚುಕ್ಕಿನಡ್ಕದ ಷಣ್ಮುಖ ಕ್ಲಬ್ಬಿನ ಸದಸ್ಯರ ಸಮವಸ್ತ್ರದೊಳಗಿರುವ ಸಮಾನ ಮನಸ್ಸು ಹಾಗೂ ಒಗ್ಗಟ್ಟಿನ ದುಡಿಮೆ ನಾಡಿನ ಅಭಿವೃದ್ಧಿಗೆ ಧ್ಯೋತಕವಾಗಿರಲಿ ಎಂದು ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕುಂಜ ತಿಳಿಸಿದರು.

ಕ್ಲಬ್ಬಿನ ನೂತನ ವರ್ಷದ ಸಮವಸ್ತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. 


ಕಳೆದ 16 ವರ್ಷಗಳಿಂದ ಚುಕ್ಕಿನಡ್ಕ ಪರಿಸರದಲ್ಲಿ ಸಾಮಾಜಿಕ ಕಳಕಳಿಯಿಂದ ಕಾರ್ಯಾಚರಿಸುತ್ತಿರುವ ಷಣ್ಮುಖ ಕ್ಲಬ್ ಮುಂದೆಯೂ ಉತ್ತಮ ಕೆಲಸಗಳಿಂದ ಸಮಾಜಕ್ಕೆ ಮಾದರಿಯ ಸಂಘಟನೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. 

ಚುಕ್ಕಿನಡ್ಕ ಅಯ್ಯಪ್ಪ ಭಜನಾ ಮಂದಿರದ ಪ್ರಧಾನ ಗುರುಸ್ವಾಮಿಗಳಾದ ಕುಂಞಕಣ್ಣ ಗುರುಸ್ವಾಮಿ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಗುರುಸ್ವಾಮಿ ಮಧುಸೂದನ ಚುಕ್ಕಿನಡ್ಕ ಶುಭ ಹಾರೈಸಿದರು. ಕ್ಲಬ್ಬಿನ ಅಧ್ಯಕ್ಷ ಉದಯ ಚುಕ್ಕಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಸಿ.ಎಚ್. ಸ್ವಾಗತಿಸಿ, ರಂಜಿತ್ ಚುಕ್ಕಿನಡ್ಕ ವಂದಿಸಿದರು. ಕ್ಲಬ್ಬಿನ ಕಾರ್ಯದರ್ಶಿ ವಿನೀತ್ ಸಿ.ಎಚ್. ಹಾಗೂ ಸದಸ್ಯರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries