ಕಾಸರಗೋಡು: ವಿಕಲಚೇತನ ಹದಿನಾಲ್ಕರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ, ನಗರಠಾಣೆ ವ್ಯಾಪ್ತಿಯ ಸಂಸ್ಥೆಯೊಂದರಲ್ಲಿ ಅಡುಗೆಯಾಳು ಫೌಸಿಯಾ(43)ಎಂಬಾಕೆಯನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
2026 ಸೆಪ್ಟಂಬರ್ ತಿಂಗಳಲ್ಲಿ ಘಟನೆ ನಡೆದಿದ್ದು, ಬಾಲಕಿ ನೀಡಿದ ಮಾಹಿತಿಯನ್ವಯ ಸಂಸ್ಥೆ ಅಧಿಕಾರಿಗಳು ತನಿಖೆ ನಡೆಸಿ, ಚೈಲ್ಡ್‍ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಬಾಲಕಿಯನ್ನು ವೈಜ್ಞಾನಿಕ ತಪಾಸಣೆಗೊಳಪಡಿಸಿದಾಗ ಕಿರುಕುಳದ ಸಮಗ್ರ ಮಾಹಿತಿ ಬೆಳಕಿಗೆ ಬಂದಿದ್ದು, ನಂತರ ಮಹಿಳಾ ಠಾಣೆ ಪೊಲೀಸರು ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿದ್ದರು.

