HEALTH TIPS

ಆಯತಪ್ಪಿ ಕಲ್ಲಿನ ಕ್ವಾರೆಗೆ ಬಿದ್ದ ವ್ಯಕ್ತಿ ಮೃತ್ಯು

ಮಂಜೇಶ್ವರ: ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದ ಸಂದರ್ಭ ಆಯತಪ್ಪಿ ಕಲ್ಲಿನ ಕ್ವಾರೆಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.  ಮೂಲತಃ ವಿಟ್ಲ ಕೋಡಪದವು ನಿವಾಸಿ, ವರ್ಕಾಡಿ ಗುವೆದಪಡ್ಪು ಎಂಬಲ್ಲಿ ವಾಸಿಸುತ್ತಿದ್ದ ಬಾಲಕೃಷ್ಣ ನಾಯ್ಕ್ (47) ಮೃತಪಟಟವರು. 

ಭಾನುವಾರ ಇವರು ಹೊಂಡಕ್ಕೆ ಬಿದ್ದು ಬೊಬ್ಬಿಡುವ ಸಂದರ್ಭ ಸ್ಥಳೀಯರು ಆಗಮಿಸಿ, ಇವರನ್ನು ಮೇಲಕ್ಕೆತ್ತಿ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ,   ಸೋಮವಾರ ಸಾವು ಸಂಭವಿಸಿದೆ.  ಇವರು ಗುವೆದಪಡ್ಪು ವಿನಲ್ಲಿರುವ ಸಹೋದರಿ ಸುಶೀಲಾ ಅವರ ಮನೆಯಲ್ಲಿ ವಾಸಿಸುತ್ತಿದ್ದು, ಅವಿವಾಹಿತರಾಗಿದ್ದರು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries