HEALTH TIPS

ಸತತ ಪ್ರತಿನಿಧೀಕರಿಸುವ ಮುಸ್ಲಿಂಲೀಗ್ ಮಂಡಲವನ್ನು ಅಭಿವೃದ್ಧಿಗೊಳಿಸದೆ ವಂಚನೆ-ಎಂ.ಎಲ್. ಅಶ್ವಿನಿ

ಮುಳ್ಳೇರಿಯ: ಕಾಸರಗೋಡು ಮಂಡಲದಿಂದ ವಿಧಾನಸಭೆಗೆ ದಶಕಗಳಿಂದ ಸತತವಾಗಿ ಪ್ರತಿನಿಧೀಕರಿಸುವ ಟ್ರಿಪ್ಪಲ್ ಎಂಜಿನ್ ಆಡಳಿತದಲ್ಲೂ ಅಭಿವೃದ್ಧಿ ಯೋಜನೆಗಳು ಜಾರಿಯಾ ಗದೆ ಮುಸ್ಲಿಂ ಲೀಗ್ ಜನರನ್ನು ವಂಚಿಸುತ್ತಿದೆಯೆಂದು ಎನ್‍ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಆರೋಪಿಸಿದರು. 

ಕಾರಡ್ಕ ಪಂಚಾಯತಿಯ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  


ಆರೋಗ್ಯ, ಶಿಕ್ಷಣ, ಉದ್ಯೋಗ ವಲಯದ ಸಮಸ್ಯೆಗಳಿಗೆ ಪರಿಹಾರ ಕಾಣಲು, ಕುಡಿಯುವ ನೀರು, ರಸ್ತೆ ಸಹಿತದ ಮೂಲಭೂತ ಬೇಡಿಕೆಗಳನ್ನು ಈಡೇರಿಸಲು ಮುಸ್ಲಿಂ ಲೀಗ್‍ಗೆ ಹಾಗೂ  ಘಟಕ ಪಕ್ಷವಾದ ಕಾಂಗ್ರೆಸ್‍ಗೆ ಸಾಧ್ಯವಾಗಲಿಲ್ಲವೆಂದು ಅಶ್ವಿನಿ ಅಭಿಪ್ರಾಯಪಟ್ಟರು. 

ಕಾರಡ್ಕ ಪಂಚಾಯತಿ ಸಮಿತಿ ಅಧ್ಯಕ್ಷ ವಸಂತ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷೆ, ಪಂ. ಅಧ್ಯಕ್ಷೆ ಎಂ. ಜನನಿ, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಧರ ಬೆಳ್ಳೂರು, ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್ ಮಾತನಾಡಿದರು.

ಅಭ್ಯರ್ಥಿ ಪರ್ಯಟನೆಯಂಗವಾಗಿ ಬದಿಯಡ್ಕ, ಕುಂಬ್ಡಾಜೆ, ಕಾರಡ್ಕ, ಬೆಳ್ಳೂರು, ಚೆಂಗಳ ಪಂಚಾಯತಿಗಳ ವಿವಿಧ ಸಭೆಗಳಲ್ಲಿ ಅಶ್ವಿನಿ ಭಾಗವಹಿಸಿದರು. ಕೊನೆಗೆ ಭರಣಿ ಮಹೋತ್ಸವ ನಡೆಯುವ ಕಸಬಾ ಕಡಪ್ಪುರ ಶ್ರೀ ಕುರುಂಬಾ ಭಗವತೀ ಕ್ಷೇತ್ರ, ಪಾಡಿ ಬಾರಿಕ್ಕಾಡ್ ಶ್ರೀ ವಯನಾಟ್ಟು ಕುಲವನ್ ದೈವಂಕಟ್ಟು ಮಹೋತ್ಸವಕ್ಕೂ ಭೇಟಿ ನೀಡಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries