ಕಾಸರಗೋಡು: ಚೆಮ್ನಾಡ್ ಗ್ರಾಮ ಪಂಚಾಯಿತಿಯ ಕೋಳಿಯಡ್ಕದಲ್ಲಿರುವ ಜಿಲ್ಲಾ ಕ್ರೀಡಾ ಅಕಾಡೆಮಿಯ ರಾಜೀವ್ ಗಾಂಧಿ ಕ್ರೀಡಾಂಗಣವನ್ನು ಅತ್ಯಾಧುನಿಕ ಫುಟ್ಬಾಲ್ ಟರ್ಫ್ ಆಗಿ ಅಭಿವೃದ್ಧಿಪಡಿಸುವರ ಕಾಮಗಾರಿಗೆ ಶಾಸಕ ಸಿ,ಎಚ್ ಕುಞಂಬು ಚಾಲನೆ ನೀಡಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಅಂಗವಾಗಿ 496.50 ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದೇ ಸಂದರ್ಭ ಸ್ಥಳೀಯಡಳಿತ ಸಂಸ್ಥೆಗಳಿಗೆ ಕ್ರೀಡಾ ಕಿಟ್‍ಗಳ ವಿತರಣೆಯನ್ನು ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪೆÇ್ರ.ಪಿ.ರಘುನಾಥ್ ನೆರವೇರಿಸಿದರು. ಚೆಮ್ನಾಡ್ ಗ್ರಾಪಂ ಅಧ್ಯಕ್ಷೆ ಆಯೇಷಾ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರೇಷ್ಮಾ ವರದಿ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸುಕುಮಾರಿ ಶ್ರೀಧರನ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಅನ್ವರ್ ಸಾದತ್ ಕೋಳಿಯಡ್ಕ, ಚೆಮ್ಮನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಡಿ.ದಿಲೀಪ್ ಕುಮಾರ್, ರಾಜ್ಯ ಕ್ರೀಡಾ ಪರಿಷತ್ ಸದಸ್ಯ ಪಿ.ಪಿ ಅಶೋಕನ್, ಉಪಸ್ಥಿತರಿದ್ದರು. ಜಿಲ್ಲಾ ಕ್ರೀಡಾ ಮಂಡಳಿಯ ಉಪಾಧ್ಯಕ್ಷ ಪಲ್ಲಂ ನಾರಾಯಣನ್ ಸ್ವಾಗತಿಸಿದರು. ಜಿಲ್ಲಾ ಕ್ರೀಡಾ ಮಂಡಳಿಯ ಕಾರ್ಯದರ್ಶಿ ಟಿ.ವಿ. ಮದನನ್ ವಂದಿಸಿದರು.



