ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಜೈವಿಕ ವಿಜ್ಞಾನ ಶಾಲೆ ಮತ್ತು ಆನ್ವಿಕ ಸಿಗ್ನಲಿಂಗ್ ಸೊಸೈಟಿ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮೊಲೆಕ್ಯುಲರ್ ಸಿಗ್ನಲಿಂಗ್ ಸಮ್ಮೇಳನ (ಐಸಿಎಂಎಸ್-2026)ಸಮಾರೋಪ ಸಮಾರಂಭ ಕೇಂದ್ರೀಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಜರುಗಿತು.
ಜೀವಕೋಶ ಮತ್ತು ಅಂಗಗಳ ನಡುವಿನ ಸಂವಹನ ಪ್ರಕ್ರಿಯೆಗೆ ಸಂಬಂಧಿಸಿದ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ನಡೆದ ಸಮ್ಮೇಳನದಲ್ಲಿ ವಿದೇಶದಿಂದಲೂ ಸೇರಿದಂತೆ ವಿವಿಧ ದೇಶಗಳ ವಿಜ್ಞಾನಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಶೋಧನಾ ಅವಕಾಶಗಳನ್ನು ತೆರೆಯುವುದರೊಂದಿಗೆ ನವೀನ ಜ್ಞಾನ ಮತ್ತು ಚರ್ಚೆಗಳಿಗೆ ವೇದಿಕೆಯಾಯಿತು.
ಸಮಾರೋಪ ಸಮಾರಂಭದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪೆÇ್ರ. ಪಿ. ಅಪ್ಪಾ ರಾವ್ ಸಮಾರೋಪ ಭಾಷಣ ಮಾಡಿದರು. ಹವಾಮಾನ ಬದಲಾವಣೆ, ಆಹಾರ ಬಿಕ್ಕಟ್ಟು, ಕ್ಷಾಮ ಮತ್ತು ರೋಗ ಸೇರಿದಂತೆ ಜಗತ್ತು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದ್ದು, ಈ ಸಂದರ್ಭ, ಆನ್ವಿಕ ಸಂಕೇತ ಜೀವಕೋಶಗಳು ಮತ್ತು ರೋಗನಿರೋಧಕ ವ್ಯವಸ್ಥೆಗಳಂತಹ ಕ್ಷೇತ್ರಗಳಲ್ಲಿ ಪ್ರಮುಖ ಅಧ್ಯಯನಗಳನ್ನು ನಡೆಸಬೇಕಾದುದು ಅನಿವಾರ್ಯ ಎಂದು ಅವರು ತಿಳಿಸಿದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಅಧ್ಯಕ್ಷತೆ ವಹಿಸಿದ್ದರು. ಗುಜರಾತ್ ಜೈವಿಕ ತಂತ್ರಜ್ಞಾನ ವಿಶ್ವವಿದ್ಯಾಲಯದ ಮಹಾನಿರ್ದೇಶಕ ಡಾ. ಸುಬೀರ್ ಎಸ್. ಮಜುಂದಾರ್, ಡೀನ್ ಅಕಾಡೆಮಿಕ್ ಪೆÇ್ರ. ಜೋಸೆಫ್ ಕೊಯಿಪಲ್ಲಿ, ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಪೆÇ್ರ. ರಾಜೇಂದ್ರ ಪಿಲಾಂಕಟ್ಟೆ ಮತ್ತು ಪೆÇ್ರ. ಡೆನ್ನಿಸ್ ಥಾಮಸ್ ಉಪಸ್ಥಿತರಿದ್ದರು.
ಸಸ್ಯ ವಿಜ್ಞಾನ ವಿಭಾಗದ ಮುಖ್ಯಸ್ಥ ಪೆÇ್ರ. ಕೆ. ಅರುಣ್ ಕುಮಾರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಇಂದ್ರಶಿಶ್ ಭಟ್ಟಾಚಾರ್ಯ ವಂದಿಸಿದರು. ಅತ್ಯುತ್ತಮ ಪ್ರಬಂಧ ಮತ್ತು ಪೆÇೀಸ್ಟರ್ ಪ್ರಸ್ತುತಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಕೆನಡಾ,ಅಮೆರಿಕ, ಜರ್ಮನಿ, ಜಪಾನ್ ಮತ್ತು ಇತರ ದೇಶಗಳ ತಜ್ಞರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.



