HEALTH TIPS

ಮುಸ್ಲಿಮರ ಬಹಿಷ್ಕಾರಕ್ಕೆ ಪ್ರತಿಜ್ಞೆ: ವ್ಯಾಪಕ ವಿರೋಧ

ವಸೈ: ಸಿನಿಮಾ ಮಂದಿರದಲ್ಲಿ ಜನರು ಘೋಷಣೆಗಳನ್ನು ಕೂಗುತ್ತಾ ಮುಸ್ಲಿಮರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಿಷ್ಕರಿಸುವುದಾಗಿ ಪ್ರತಿಜ್ಞೆ ಕೈಗೊಳ್ಳುತ್ತಿರುವ ವಿಡಿಯೊವೊಂದು ಹರಿದಾಡಿದ್ದು, ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿಡಿಯೊ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯದ್ದು ಎನ್ನಲಾಗಿದೆ.

ಮಾರ್ಚ್‌ 10ರಂದು ವಸೈನಲ್ಲಿರುವ ಸಿನಿಮಾ ಮಂದಿರದಲ್ಲಿ ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ-2' ವೀಕ್ಷಿಸಿದ ನಂತರ ಈ ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಸೈಯದ್ ನಾಸಿರ್ ಹುಸೇನ್ ಆರೋಪಿಸಿದ್ದಾರೆ.

'ಅಪಪ್ರಚಾರದ (ಪ್ರೊಪಗಂಡಾ) ಉದ್ದೇಶದ ಸಂಕಥನಗಳಿಗೆ ಬಿಜೆಪಿ ಸರ್ಕಾರ ನೀಡಿರುವ ನಿರಂತರ ಪ‍್ರೋತ್ಸಾಹವು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಮತ್ತು ಕೋಮು ಧ್ರುವೀಕರಣವನ್ನು ಹೆಚ್ಚಿಸಿದೆ. ಇಡೀ ಸಮುದಾಯವನ್ನು ಕಳಂಕಿತಗೊಳಿಸಲು ಸಿನಿಮಾವನ್ನು ರಾಜಕೀಯ ಸಾಧನವಾಗಿ ಬಳಸಿದರೆ ಮುಸ್ಲಿಂ ವಿರೋಧಿ ಭಾವನೆ ಮತ್ತಷ್ಟು ಹೆಚ್ಚಿಸುವ ಅಪಾಯವಿದೆ' ಎಂದು ಅವರು 'ಎಕ್ಸ್‌' ಮಾಡಿದ್ದಾರೆ.

ಅವರ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿದ ಮಿರಾ-ಬಾಯಿಂದರ್ ವಸೈ-ವಿರಾರ್(ಎಂಬಿವಿವಿ) ಪೊಲೀಸ್ ಕಮಿಷನರೇಟ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, 'ವಿಡಿಯೊದ ಸತ್ಯಾಸತ್ಯತೆಯನ್ನು ಇನ್ನಷ್ಟೆ ದೃಢೀಕರಿಸಬೇಕಾಗಿದೆ' ಎಂದು ತಿಳಿಸಿದ್ದಾರೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries