ಕಾಸರಗೋಡು: ಸಾಮಾಜಿಕ ಅರಣ್ಯ ಇಲಾಖೆಯು ಕಾವುಗೋಳಿ ಪ್ರದೇಶದಲ್ಲಿ ಪತ್ತೆಯಾಗಿದ್ದ ಸಮುದ್ರ ಆಮೆ ಮೊಟ್ಟೆಗಳನ್ನು ಸಂರಕ್ಷಿಸಿ ಕೃತಕ ಕಾವು ನೀಡಿದ ಪರಿಣಾಮ ಹೊರಬಂದ 95 ಆಲಿವ್ ರೆಡಿಶ್ ಆಮೆ ಮರಿಗಳನ್ನು ಸಮುದ್ರಕ್ಕೆ ಬಿಡುವ ಕಾರ್ಯಕ್ರಮ ನಡೆಯಿತು.
ಕಾಸರಗೋಡು ನಗರಸಭಾ ವಾರ್ಡು ಸದಸ್ಯೆ ಪಿ. ಮಲ್ಲಿಕಾ ಅವರ ಉಪಸ್ಥಿತಿಯಲ್ಲಿ ಆಮೆಗಳನ್ನು ಸಮುದ್ರಕ್ಕೆ ಬಿಡಲಾಯಿತು. ಕಾಸರಗೋಡು ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಗಿರೀಶ್ ಕೆ, ಉಪ ವಲಯ ಅರಣ್ಯಾಧಿಕಾರಿ (ಗ್ರೇಡ್) ವಿಜಯನಾಥ್ ಕೆ.ಆರ್, ಮತ್ತು ವಿಭಾಗ ಅರಣ್ಯ ಅಧಿಕಾರಿ ಕೆ. ಜಯಕುಮಾರನ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಬೇಕಲ ಕರಾವಳಿ ಪೆÇಲೀಸ್ ಠಾಣೆಯ ಎಸ್‍ಎಚ್‍ಒ ಯೂಸುಫ್ ನಡುತ್ತರಪರಂಬಿಲ್, ಸಬ್ ಇನ್ಸ್‍ಪೆಕ್ಟರ್ ರಾಧಾಕೃಷ್ಣನ್, ಸಮುದ್ರ ಆಮೆ ಸಂರಕ್ಷಣಾ ವೀಕ್ಷಕರಾದ ಬಿ.ಕೆ. ಜಯೇಶ್ ಮತ್ತು ವೇದಪ್ರಕಾಶ್ ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.



