HEALTH TIPS

ಹೊಸಂಗಡಿ ವಸತಿಗೃಹದಲ್ಲಿ ಜೋಡಿಯ ನಗ್ನ ವೀಡಿಯೋ-ಆರೋಪಿ ಬಂಧನ-ಕಾರ್ಯಾಚರಣೆ ಮಧ್ಯೆ ಪೊಲೀಸರ ಮೇಲೆ ಹಲ್ಲೆ, ಕೇಸು

ಮಂಜೇಶ್ವರ: ಹೊಸಂಗಡಿಯ ವಸತಿಗೃಹಕ್ಕೆ ಅತಿಕ್ರಮಿಸಿ ಯುವಕ ಹಾಗೂ ಆತನ ಗೆಳತಿಯ ನಗ್ನ ಚಿತ್ರ ಸಹಿತ ವೀಡಿಯೋ ಮಾಡಿ ಬೆದರಿಕೆಯೊಡ್ಡಿ ಹಣ ವಸೂಲು ಮಾಡಿದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಚ್ಚಂಪಾಡಿಯಿಂದ ಪೆÇಲೀಸರು ಬಂಧಿಸಿದ್ದಾರೆ. 

ಬಂಧನ ಕಾರ್ಯಾಚರಣೆ ಸಂದರ್ಭ ಮಹಿಳೆಯರನ್ನೊಳಗೊಂಡ ತಂಡವೊಂದು ಪೊಲೀಸರ ಮೇಲೆ ಕಲ್ಲೆಸೆದು ಆಕ್ರಮಣ ನಡೆಸಿದ ಪರಿಣಾಮ ಇಬ್ಬರು ಪೆÇಲೀಸರು ಗಾಯಗೊಂಡಿದ್ದಾರೆ. ಆಕ್ರಮಣದಲ್ಲಿ ಗಾಯಗೊಂಡಿರುವ ಎಎಸ್‍ಐ  ಸದನ್, ಪೆÇಲೀಸ್ ಸಿಬಂದಿ ವಂದನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.   

ಜ. 14ರಂದು ಹೊಸಂಗಡಿಯ ವಸತಿಗೃಹವೊಂದಕ್ಕೆ ಆಕ್ರಮಿಸಿ ಉಳ್ಳಾಲ ತಾಲೂಕಿನ ಮುಹ್ಮದ್ ಹನೀಫ (41)ಹಾಗೂ ಈತನ ಗೆಳತಿ ನಾಟೆಕಲ್ಲಿನ ಇಸ್ರತ್ತ್(30) ಎಂಬವರನ್ನು ಬೆದರಿಸಿ ನಗ್ನ ವೀಡಿಯೋ ತೆಗೆದು ಹಣಕ್ಕಾಗಿ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಚ್ಚಂಪಾಡಿಯ ಹೈದರ್ ಆಲಿ ಎಂಬಾತನನ್ನು ಸೆರೆ ಹಿಡಿಯುವಾಗ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಈ ಹಿಂದೆ ಬಂಧಿಸಲಾಗಿದೆ.

ಪ್ರಕರಣದ ಬಳಿಕ ಹೈದರಾಲಿ ತಲೆಮರೆಸಿಕೊಂಡಿದ್ದನು. ಈತ ಮನೆಗೆ ಆಗಮಿಸಿರುವ ಬಗ್ಗೆ ಮಾಹಿತಿ ಪಡೆದ ಪೆÇಲೀಸರು ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆ ಮಧ್ಯೆ ಪೊಲೀಸರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಪತ್ನಿ ಸೇರಿದಂತೆ  ಎಂಟು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries