ಟೆಹ್ರಾನ್: ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಗೆ ಪ್ರತಿಯಾಗಿ ಇಸ್ರೇಲನ್ನು ಗುರಿಯಾಗಿಸಿ ಕ್ಷಿಪಣಿಗಳು ಮತ್ತು ಡ್ರೋನ್‍ಗಳ ಸುರಿಮಳೆಗರೆದಿರುವುದಾಗಿ ಇರಾನ್‍ನ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಘೋಷಿಸಿದೆ.
ಜೆರುಸಲೇಂ ಮತ್ತು ಟೆಲ್ ಅವೀವ್‍ನಲ್ಲಿ ಹಲವು ಸ್ಫೋಟಗಳು ಕೇಳಿಸಿವೆ.
ಆದರೆ ಸಾವು-ನೋವಿನ ಮಾಹಿತಿಯಿಲ್ಲ ಎಂದು ವರದಿಯಾಗಿದೆ.
`ಆಕ್ರಮಣಕ್ಕೆ ಉತ್ತರವಾಗಿ ಇಸ್ರೇಲ್‍ನತ್ತ ಪ್ರಥಮ ಹಂತದ ಬೃಹತ್ ಮಟ್ಟದ ಕ್ಷಿಪಣಿ ಮತ್ತು ಡ್ರೋನ್‍ಗಳ ದಾಳಿ ಪ್ರಾರಂಭಗೊಂಡಿದೆ. ಇರಾನ್ ವಿರುದ್ದ ಪ್ರತಿಕೂಲ ಮತ್ತು ಕ್ರಿಮಿನಲ್ ಶಕ್ತಿಗಳ ಆಕ್ರಮಣಕ್ಕೆ ಇದು ಪ್ರತೀಕಾರವಾಗಿದೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ದದ ನಮ್ಮ ಪ್ರತೀಕಾರವು ಅವರ ಸೋಲಿನವರೆಗೆ ಮುಂದುವರಿಯಲಿದೆ. ಪರಿಸ್ಥಿತಿಯನ್ನು ಕೀಳಂದಾಜಿಸದಂತೆ ನಾವು ಈ ಹಿಂದೆ ಅವರಿಗೆ ಎಚ್ಚರಿಕೆ ನೀಡಿದ್ದೇವೆ' ಎಂದು ಇರಾನ್‍ನ ಸಶಸ್ತ್ರ ಪಡೆಗಳ ವಕ್ತಾರರು ಹೇಳಿದ್ದಾರೆ.

