HEALTH TIPS

ಕೇರಳದಲ್ಲಿಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: ಸರ್ಕಾರಿ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ವಯೋಮಿತಿ ಹೆಚ್ಚಳ

ಕುಂಬಳೆ: ಕೇರಳದಲ್ಲಿ ಇನ್ನು ಸರ್ಕಾರಿ ಉದ್ಯೋಗಕ್ಕಾಗಿ ಸಾಮಾನ್ಯ ವಿಭಾಗದವರು ಅರ್ಜಿ ಸಲ್ಲಿಸುವ ವಯಸ್ಸಿನ ಮಿತಿಯನ್ನು 40 ವರ್ಷಗಳಿಗೆ ಹೆಚ್ಚಿಸಲಾಗಿದೆ. ಇದು ಪ್ರಸ್ತುತ 36 ವರ್ಷವಾಗಿತ್ತು. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಸರ್ಕಾರ ವಯಸ್ಸಿನ ಮಿತಿಯನ್ನು 4 ವರ್ಷಗಳಷ್ಟು ಹೆಚ್ಚಿಸಿದೆ. 


ಜೊತೆಗೆ ಒಬಿಸಿ ಮೀಸಲು ವರ್ಗಗಳು 43 ವರ್ಷ ವಯಸ್ಸಿನವರೆಗೆ ಅರ್ಜಿ ಸಲ್ಲಿಸಬಹುದು. ಎಸ್‍ಸಿ, ಎಸ್‍ಟಿ ವಿಭಾಗದವರಿಗೆ 45 ವರ್ಷದ ತನಕ ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ಮೂಲಕ ಕೇರಳ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳ ಬಹುಕಾಲದ ಬೇಡಿಕೆಗೆ ಸರ್ಕಾರ ಅಸ್ತು ಎಂದಿದೆ. ಪಾಲುಗಾರಿಕೆ ಪಿಂಚಣಿ ಯೋಜನೆಯನ್ನು ಪರಿಚಯಿಸಿದಾಗ, ಕೇರಳದಲ್ಲಿ ನೌಕರರ ನಿವೃತ್ತಿ ವಯಸ್ಸು 56 ವರ್ಷಗಳು. ಪಿಎಸ್‍ಸಿ ಮೂಲಕ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿ 36 ವರ್ಷಗಳು. ಪಾಲುಗಾರಿಕೆ ಪಿಂಚಣಿ ಯೋಜನೆಯಡಿಯಲ್ಲಿ, 2013ರ ನಂತರ ನೇಮಕಗೊಂಡ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸಲಾಗಿತ್ತು.

ಹಿಂದುಳಿದವರು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿಭಾಗಗಳನ್ನು ಒಳಗೊಂಡಿರುವ ಪ್ರಮುಖ ಜನಸಂಖ್ಯಾ ಶಾಸ್ತ್ರೀಯವಾದ ಇತರ ಹಿಂದುಳಿದ ಸಮುದಾಯಗಳು (ಒಬಿಸಿ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗಗಳಿಗೆ ಸೇರಿದವರು ಸೇರಿದಂತೆ ಉದ್ಯೋಗ ಆಕಾಂಕ್ಷಿಗಳ ವಯಸ್ಸಿನ ಮಿತಿಯನ್ನು ಅನುಗುಣವಾಗಿ ಹೆಚ್ಚಿಸಲಾಗಿದೆ.

ಉಳಿದ ರಾಜ್ಯಗಳಲ್ಲಿ ಹೇಗಿದೆ?:

ಕೇರಳ ಸರ್ಕಾರ ಲೋಕಸೇವಾ ಆಯೋಗದ ಮೂಲಕ ಅರ್ಜಿಗಳನ್ನು ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿ 36 ರಿಂದ 40ಕ್ಕೆ ಹೆಚ್ಚಿಸಿದೆ. ತೆಲಂಗಾಣ ರಾಜ್ಯದಲ್ಲಿ ಇದು 46, ಗೋವಾದಲ್ಲಿ 45, ಆಂಧ್ರಪ್ರದೇಶದಲ್ಲಿ 42, ಒಡಿಶಾದಲ್ಲಿ 42, ಹರಿಯಾಣದಲ್ಲಿ 42, ಉತ್ತರಾಖಂಡದಲ್ಲಿ 42, ಛತ್ತೀಸ್‍ಗಢದಲ್ಲಿ 40, ಮಧ್ಯಪ್ರದೇಶದಲ್ಲಿ 40 ಮತ್ತು ಉತ್ತರ ಪ್ರದೇಶದಲ್ಲಿ 40 ವರ್ಷಗಳ ವಯೋಮಿತಿಯವರಿಗೆ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.

ಯುವ ನಿರುದ್ಯೋಗಿಗಳ ಪ್ರಮಾಣ ಶೇ.29.9 ರಷ್ಟು ಹೊಂದಿರುವ ಕೇರಳದಲ್ಲಿ ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿವರೆಗಿನ ಅರ್ಹತೆ ಹೊಂದಿರುವ ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಇದು ವರದಾನವಾಗಲಿದೆ.

ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ ಮತ್ತು ರಾಜಕೀಯ ಪಕ್ಷಗಳ ಯುವ ಸಂಘಟನೆಗಳು ನಡೆಸಿದ ಪ್ರತಿಭಟನೆಗಳ ಹಿನ್ನೆಲೆಯಲ್ಲಿಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇರಳ ಸರ್ಕಾರ ಖಾಲಿ ಬಿದ್ದಿರುವ ಹುದ್ದೆಗಳನ್ನು ವರದಿ ಮಾಡದೇ, ಲಭ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲು ವಿಫಲವಾಗಿದೆ ಮತ್ತು ನಾಗರಿಕ ಪೋಲೀಸ್ ಅಧಿಕಾರಿಗಳು (ಸಿಪಿಒ) ಮತ್ತು ಕೊನೆಯ ದರ್ಜೆಯ ಸೇವಕರು (ಎಲ್‍ಎಸ್‍ಜಿ) ಸೇರಿದಂತೆ ಪಿಎಸ್‍ಸಿ ರ್ಯಾಂಕ್ ಪಟ್ಟಿಗಳ ಅವಧಿ ಮುಗಿಯಲು ಉದ್ದೇಶಪೂರ್ವಕವಾಗಿ ಅವಕಾಶ ನೀಡದೇ ಹಾಗೆಯೇ ಉಳಿಸಿಕೊಂಡಿತ್ತು.

ಕೇರಳ ಸರಕಾರವು ವಯಸ್ಸಿನ ಮಾನದಂಡಗಳಲ್ಲಿನ ಬದಲಾವಣೆಯು ಲಕ್ಷಾಂತರ ಪಿಎಸ್‍ಸಿ ಆಕಾಂಕ್ಷಿಗಳಿಗೆ ಸಹಾಯ ಮಾಡುವುದು ಖಚಿತ ಎಂದು ಕೇರಳ ಪಿಎಸ್‍ಸಿ ನೌಕರರ ಸಂಘದ ಅಧ್ಯಕ್ಷ ಕೆ. ಸೆಬಾಸ್ಟಿಯನ್ ಹೇಳಿದ್ದಾರೆ.

ನಿವೃತ್ತಿ ವಯಸ್ಸು 60ಕ್ಕೆ ಏರಿಕೆ?

ಕೇರಳದಲ್ಲಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ 56 ವರ್ಷ ನಿವೃತ್ತಿ ವಯಸ್ಸಾಗಿದ್ದು, ನಿವೃತ್ತರಾಗುವ ಲಕ್ಷಾಂತರ ಸರ್ಕಾರಿ ನೌಕರರ ನಿವೃತ್ತಿಯನ್ನು ಇನ್ನು ನಾಲ್ಕು ವರ್ಷಗಳ ತನಕ ಮುಂದೂಡುವ ಮೂಲಕ ನಿವೃತ್ತರಾದಾಗ ಪ್ರಸ್ತುತ ಪಾವತಿಸಬೇಕಾದ ಕೋಟ್ಯಂತರ ರೂ. ಪಿಂಚಣಿ ಪ್ರಯೋಜನಗಳನ್ನು ಮುಂದೂಡುವುದರಿಂದ ರಾಜ್ಯ ಖಜಾನೆಗೆ ದೊಡ್ಡ ಆರ್ಥಿಕ ಪರಿಹಾರವಾಗಬಹುದು ಎಂಬುದು ಸರ್ಕಾರದ ಅಂದಾಜು.

ಆದರೆ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದು ಹೊಸ ಅಭ್ಯರ್ಥಿಗಳಲ್ಲಿ ದೊಡ್ಡ ಪ್ರತಿಭಟನೆಗೆ ಕಾರಣವಾಗುವ ಸಾಧ್ಯತೆಯಿದೆ. ಸರ್ಕಾರ ಈ ಪ್ರತಿಭಟನೆಯನ್ನು ತಣ್ಣಗಾಗಿಸಲು ಮತ್ತು 36 ವರ್ಷದ ನಂತರ ಸರ್ಕಾರ ಉದ್ಯೋಗ ಭರವಸೆಯನ್ನು ಕಳೆದುಕೊಂಡವರಿಗೆ ಮತ್ತೊಂದು ಅವಕಾಶ ನೀಡುವ ಪ್ರಯತ್ನವಾಗಿಯೇ ಈಗ ಅರ್ಜಿ ಸಲ್ಲಿಕೆಗೆ ವಯಸ್ಸಿನ ಮಿತಿ ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಲಾಗುವುವುದು. ಈ ನಿರ್ಧಾರವು ವಿದ್ಯಾವಂತ ಯುವಕರಿಗೆ, ವಿಶೇಷವಾಗಿ ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸರ್ಕಾರಿ ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚಿಸಿದೆ ಎಂದಿದ್ದಾರೆ ಎ.ಬಶೀರ್, ಕೇರಳ ಪಿಎಸ್‍ಸಿ ರ್ಯಾಂಕ್ ಪಟ್ಟಿ ಹೊಂದಿರುವವರ ಸಂಘದ ಕಾರ್ಯದರ್ಶಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries