HEALTH TIPS

ಮಂಜೇಶ್ವರದಲ್ಲಿ ಎನ್.ಡಿ.ಎ. ಪ್ರಚಾರಕ್ಕೆ ಚಾಲನೆ ನೀಡಿದ ಕೇಂದ್ರ ಸಹ ಸಚಿವ ಸುರೇಶ್ ಗೋಪಿ

ಕುಂಬಳೆ: ವಿಧಾನಸಭಾ ಚುನಾವಣೆಗೆ ಮಂಜೇಶ್ವರ ಮಂಡಲ ಎನ್.ಡಿ.ಎ ಅಭ್ಯರ್ಥಿ ಕೆ.ಸುರೇಂದ್ರನ್ ಪರವಾದ ಗೋಡೆ ಬರಹ ಪ್ರಚಾರಕ್ಕೆ ಕುಂಬಳೆಯಲ್ಲಿ ಬುಧವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯ ಸಂದರ್ಶಿಸಿದ ಬಳಿಕ ಕುಂಬಳೆ ಪೇಟೆಯಲ್ಲಿ ಕೇಂದ್ರ ಸಹ ಸಚಿವ, ಚಿತ್ರ ನಟ ಸುರೇಶ್ ಗೋಪಿ ತಾವರೆ ಚಿಹ್ನೆ ಬರೆದು ಗೋಡೆ ಬರಹ ಉದ್ಘಾಟಿಸಿದರು. 


ಮಂಜೇಶ್ವರ ಮಂಡಲ ಎನ್.ಡಿ.ಎ. ಅಭ್ಯರ್ಥಿ ಕೆ. ಸುರೇಂದ್ರನ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಮಂಜೇಶ್ವರ ಎನ್.ಡಿ.ಎ ಸಂಚಾಲಕ ವಿಜಯ ಕುಮಾರ್ ರೈ, ಹಿರಿಯ ರಾಜ್ಯ ಸಮಿತಿ ಸದಸ್ಯ ವಿ.ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕುಂಬಳೆ ಮಂಡಲಾಧ್ಯಕ್ಷ ಸುನಿಲ್ ಅನಂತಪುರ ಸಹಿತ ಪ್ರಮುಖ ಕಾರ್ಯಕರ್ತರು ಪಾಲ್ಗೊಂಡರು.

ಬೆಳಿಗ್ಗೆ ಕಾಸರಗೋಡು ತಲುಪಿದ ಕೇಂದ್ರ ಸಚಿವ, ನಟ ಸುರೇಶ್ ಗೋಪಿ ಜಿಲ್ಲೆಯ ಎನ್.ಡಿ.ಎ ಅಭ್ಯರ್ಥಿಗಳ ಪರ ಪ್ರಚಾರದ ಗೋಡೆ ಬರಹ ಬರೆದರು. ಕುಂಬಳೆಯಲ್ಲಿ ಗೋಡೆ ಬರಹ ಬರೆದ ಅವರು ಬಳಿಕ ಅನಂತಪುರ ಕ್ಷೇತ್ರ ಸಂದರ್ಶಿಸಿದರು. ಬಳಿಕ ಕಾಸರಗೋಡು ನಗರದಲ್ಲಿ ಎನ್. ಡಿ. ಎ ಅಭ್ಯರ್ಥಿ ಪರವಾದ ಗೋಡೆ ಬರಹ ಬರೆದು ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿ ಕಾರ್ಯಕರ್ತರ ಹುರುಪಿಗೆ ಕಾರಣರಾದರು. ಸ್ಥಳೀಯ ಮುಖಂಡರಾದ ವಿಕ್ರಂ ಪೈ, ಸುಧಾಕರ ಕಾಮತ್, ಮಹೇಶ್ ವಳಕ್ಕುಂಜ ಸಹಿತ ನೂರಾರು ಕಾಯರ್ತಕರ್ತರು ಭಾಗವಹಿಸಿದ್ದರು.  

ವಿರೋಧ ಪಕ್ಷ ಯುಡಿಎಫ್ ಅಭ್ಯರ್ಥಿಗಳನ್ನು ಘೋಷಿಸಲು ಹಿಂದೆ-ಮುಂದೆ ನೋಡುವ ಪರಿಸ್ಥಿತಿಯಲ್ಲಿದೆ ಎಂದು ಅಭ್ಯರ್ಥಿ ಕೆ. ಸುರೇಂದ್ರನ್ ಮಾಧ್ಯಮಗಳಿಗೆ ತಿಳಿಸಿದರು. ಸಿಪಿಎಂನಲ್ಲಿ ಅಭೂತಪೂರ್ವ ಬಂಡಾಯ ನಡೆದಿದೆ. ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ. ನಿರ್ಣಾಯಕ ಶಕ್ತಿಯಾಗಲಿದೆ. ಯುಡಿಎಫ್ ಅಥವಾ ಎಲ್.ಡಿ.ಎಫ್ ಬಹುಮತ ಪಡೆಯುವುದಿಲ್ಲ ಎಂಬುದು ಖಚಿತ. ಕೇರಳ ದೊಡ್ಡ ರಾಜಕೀಯ ಬದಲಾವಣೆಗಾಗಿ ಕಾಯುತ್ತಿದೆ ಎಂದು ಅವರು ಹೇಳಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries