HEALTH TIPS

ಮುನಿಯೂರು ದೇವಸ್ಥಾನದಲ್ಲಿ ಇಂದು ಅನುಜ್ಞಾ ಪ್ರಾರ್ಥನೆ; ನಾಳೆ ಜೀವಕಲಶ ಪೂಜೆ

ಬದಿಯಡ್ಕ: ಕುಂಬ್ಡಾಜೆ ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೂರನೇ ದಿನ ಮಂಗಳವಾರ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಹಾಗೂ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ಪೂರ್ವಾಹ್ನ ಗಣಪತಿ ಹೋಮ, ವಿವಿಧ ಶಾಂತಿಹೋಮಗಳು, ಅಂಕುರ ಪೂಜೆ, ತ್ರಿಕಾಲ ಪೂಜೆ, ಮಹಾಪೂಜೆ ಜರಗಿತು. ಸಂಜೆ ಹೋಮಕಲಶಾಭಿಷೇಕ, ಅನುಜ್ಞಾಕಲಶ ಪೂಜೆ, ಅವಾಸ ಹೋಮ, ಕಲಶಾಧಿವಾಸ, ಮಹಾಪೂಜೆ, ರಾತ್ರಿಪೂಜೆ, ಪ್ರಸಾದ ವಿತರಣೆ ಜರಗಿತು. ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ ನಂದನ್ ಶರ್ಮ ಪಂಜಿತ್ತಡ್ಕ, ಈಶಾನಿ ಭಟ್ ಹೊರಂಗಳ ಹಾಗೂ ಚಿರಾಗ್ ಕೃಷ್ಣ ವಾಶೆ, ಸುನಾದ ಸಂಗೀತ ಕಲಾಶಾಲೆ ಬದಿಯಡ್ಕ ನಿರ್ದೇಶನ ವಾಣೀಪ್ರಸಾದ್ ಕಬೆಕ್ಕೋಡು, ರಾತ್ರಿ ಟೀಮ್ ರಾಧಾ ಮಾಧವಂ ಮುನಿಯೂರು ಇವರಿಂದ ತಿರುವಾದಿರಕ್ಕಳಿ ನಡೆಯಿತು.


ಇಂದು ನಡೆಯುವ (ಬುಧವಾರ) ಕಾರ್ಯಕ್ರಮಗಳು :

ಪೂರ್ವಾಹ್ನ ಗಣಪತಿ ಹೋಮ, ತತ್ವಕಲಶ ಪೂಜೆ, ತತ್ವಹೋಮ, ತತ್ವಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಅಂಕುರ ಪೂಜೆ, ತ್ರಿಕಾಲ ಪೂಜೆ, ರಾತ್ರಿ ಅನುಜ್ಞಾಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಅಂಕುರ ಪೂಜೆ, ತ್ರಿಕಾಲ ಪೂಜೆ, ಬಿಂಬಶುದ್ಧಿ, ಕಲಶಪೂಜೆ, ಮಹಾಪೂಜೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ರಿಂದ ಪುತ್ತೂರು ತೆಂಕಿಲ ೀಶಕ್ತಿ ಮಹಿಳಾ ಯಕ್ಷಬಳಗ ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ನಾಳೆ (ಗುರುವಾರ) ನಡೆಯುವ ಕಾರ್ಯಕ್ರಮಗಳು :

ಪೂರ್ವಾಹ್ನ ಗಣಪತಿ ಹೋಮ, ಸಂಹಾರತತ್ವ ಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರೀ ಪೂಜೆ, ಶಯ್ಯಾಪೂಜೆ, ತತ್ವಕಲಶಾಭಿಷೇಕ, ಜೀವಕಲಶಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯೋನ್ನಯನ, ಅಂಕುರ ಪೂಜೆ, ಸಂಜೆ 7ರಿಂದ ಬಿಂಬಶುದ್ಧಿ, ಕಲಶಾಭಿಷೇಕ, ಪೀಠಾಧಿವಾಸ, ಧ್ಯಾನಾಧಿವಾಸ, ಅವಾಸ ಹೋಮ, ಅವಾಸ ಬಲಿ, ತ್ರಿಕಾಲ ಪೂಜೆ, ಶಿರಸ್ತತ್ವ ಹೋಮ, ಪುಣ್ಯಾಹವಾಚ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಮಹಾಪೂಜೆ ನಡೆಯಲಿದೆ. ಸಂಜೆ 5.30ರಿಂದ ಅಗಲ್ಪಾಡಿ ಮಾರ್ಪನಡ್ಕ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ, ರಾತ್ರಿ 7ಕ್ಕೆ ಕಲಾತಪಸ್ವಿ ನಾಟ್ಯಗುರು ವಿದ್ವಾನ್ ಬಾಲಕೃಷ್ಣ ಮಾಸ್ತರ್ ನಾಟ್ಯನಿಲಯಂ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ಭರತನಾಟ್ಯ `ಕೃಷ್ಣಾಯಸ್ತುಭ್ಯಂ ನಮಃ' ನಡೆಯಲಿದೆ. ಆನುವಂಶಿಕ ಮೊಕ್ತೇಸರ ಗೋಪಾಲಕೃಷ್ಣ ನಡುವಂತಿಲ್ಲಾಯ, ಆಡಳಿತ ಮೊಕ್ತೇಸರ ಹರಿನಾರಾಯಣ ನಡುವಂತಿಲ್ಲಾಯ, ಸೇವಾ ಸಮಿತಿ ಅಧ್ಯಕ್ಷ ಅಜ್ಜಿಮೂಲೆ ಕೃಷ್ಣ ಭಟ್ ಹಾಗೂ ವಿವಿಧ ಸಮಿತಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರಗುತ್ತಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries