ಬದಿಯಡ್ಕ: ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಸಂಚರಿಸುವ ರಾಮನವಮಿ ರಥಯಾತ್ರೆ ಮಂಗಳವಾರ ಬೆಳಗ್ಗೆ ಬದಿಯಡ್ಕಕ್ಕೆ ಆಗಮಿಸಿದ್ದು ಹಾರಾರ್ಪಣೆಗೈದು ಬರಮಾಡಿಕೊಳ್ಳಲಾಯಿತು. ಎಂ.ಸುಧಾಮ ಗೋಸಾಡ ಸ್ವಾಗತಿಸಿದರು. ರಥಯಾತ್ರೆಯ ಧ್ಯೇಯೋದ್ದೇಶದ ಬಗ್ಗೆ ರವೀಶ ತಂತ್ರಿ ಕುಂಟಾರು ದಿಕ್ಸೂಚಿ ಭಾಷಣಗೈದು ಮಾತನಾಡಿದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ., ಪ್ರಮುಖರಾದ ಉದನೇಶ್ವರ ಬದಿಯಡ್ಕ, ನಾರಾಯಣ ಭಟ್ ಮೈರ್ಕಳ, ಆನಂದ ಪೆರಡಾಲ, ಗಂಗಾಧರ ಪಳ್ಳತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಮಹೇಶ್ ವಳಕುಂಜ ವಂದಿಸಿದರು.

.jpg)
