ಬದಿಯಡ್ಕ: ಭಾರತೀಯ ಸೇನೆ ಬಾರ್ಡರ್ ಸೆಕ್ಯೂರಿಟಿ ಪೋರ್ಸ್‍ಗೆ ಆಯ್ಕೆಯಾದ ನೀರ್ಚಾಲು ಸಮೀಪದ ದೇವರಮೆಟ್ಟು ನಿವಾಸಿ ಮಧುರಾಜ್ ಅವರನ್ನು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷರು ಶಾಲು ಹೊದೆಸಿ ಅಭಿನಂದಿಸಿದರು.
ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ ಸಿಹಿತಿಂಡಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸಿಡಿಎಸ್ ಅಧ್ಯಕ್ಷೆ ಸುಲೋಚನ ಪುದುಕೋಳಿ, ಉಪಾಧ್ಯಕ್ಷೆ ಜಯಂತಿ ಕುಂಟಿಕಾನ, ಈಶ್ವರಚಂದ್ರ ಪ್ರಸಾದ ಕುಳಮರ್ವ ಉಪಸ್ಥಿತರಿದ್ದರು.

.jpg)
