ಬ್ರಸೆಲ್ಸ್ ನಲ್ಲಿ ಇಯು ರಾಯಭಾರಿಗಳ ಸಭೆಯಲ್ಲಿ ಮಾತನಾಡಿದ ಕೋಸ್ಟ ʼಇಂಧನ ಬೆಲೆ ಹೆಚ್ಚಿರುವುದು ಉಕ್ರೇನ್ ವಿರುದ್ದದ ಯುದ್ದಕ್ಕೆ ಹೊಸ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಿಕೊಟ್ಟಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಪ್ರಾಮುಖ್ಯತೆ ಪಡೆದಿರುವುದರಿಂದ ಉಕ್ರೇನ್ ಯುದ್ದದತ್ತ ಗಮನ ಕಡಿಮೆಯಾಗಿದೆʼ ಎಂದ ಅವರು, ಈಗ ಅಮೆರಿಕದಿಂದ ಸವಾಲು ಎದುರಿಸುತ್ತಿರುವ ಅಂತಾರಾಷ್ಟ್ರೀಯ ನಿಯಮಗಳ ಆಧಾರಿತ ವ್ಯವಸ್ಥೆಯನ್ನು ರಕ್ಷಿಸುವ ಮತ್ತು ಮಧ್ಯಪ್ರಾಚ್ಯದ ಎಲ್ಲಾ ಪಕ್ಷಗಳು ಸಮಾಲೋಚನೆ ಪ್ರಕ್ರಿಯೆಗೆ ಮರಳುವ ಅಗತ್ಯವನ್ನು ಒತ್ತಿ ಹೇಳಿದರು.
ʼಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ಬಾಂಬ್ ಗಳ ಮೂಲಕ ಸಾಧಿಸಲಾಗದು. ಅಂತಾರಾಷ್ಟ್ರೀಯ ಕಾನೂನು ಮಾತ್ರ ಅವುಗಳನ್ನು ಎತ್ತಿಹಿಡಿಯುತ್ತದೆ. ನಾವು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸಬೇಕು. ಅಂತಹ ಮಾರ್ಗವು ಮಧ್ಯಪ್ರಾಚ್ಯ, ಯುರೋಪ್ ಮತ್ತು ಅದರಾಚೆಗೆ ಬೆದರಿಕೆ ಹಾಕುತ್ತದೆ' ಎಂದು ಕೋಸ್ಟ ಹೇಳಿರುವುದಾಗಿ ವರದಿಯಾಗಿದೆ.

