HEALTH TIPS

ಭಾರತೀಯರೇ ಹೆಚ್ಚಿರುವ ಇಸ್ರೇಲ್‌ನ 'ಲಿಟಲ್ ಇಂಡಿಯಾ' ಮೇಲೆ ಇರಾನ್‌ ಕ್ಷಿಪಣಿ ದಾಳಿ

 ಜೆರುಸಲೆಮ್: ದಕ್ಷಿಣ ಇಸ್ರೇಲ್‌ನ ಡಿಮೋನಾ ಪಟ್ಟಣದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 47 ಜನರು ಗಾಯಗೊಂಡಿದ್ದಾರೆ. ಗುಮ್ಮಟಾಕಾರದ ಪರಮಾಣು ಕೇಂದ್ರದ ರಚನೆ ಮತ್ತು ಲಿಟಲ್ ಇಂಡಿಯಾ ಎಂದೇ ಈ ನಗರ ಜನಪ್ರಿಯವಾಗಿದೆ ಎಂದು ವರದಿ ತಿಳಿಸಿವೆ. 


ಗಾಯಾಳುಗಳ ಪೈಕಿ 12 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ನಗರದ ಮ್ಯಾಗೆನ್ ಡೇವಿಡ್ ಆಡಮ್ ಎಂಡಿಎ) ರಕ್ಷಣಾ ಸೇವೆಗಳ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

30 ವರ್ಷದ ಮಹಿಳೆಗೂ ಗಾಜಿನ ಚೂರುಗಳು ಚುಚ್ಚಿಕೊಂಡು ಗಾಯವಾಗಿದೆ. ಇತರ 11 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೆ ಕೆಲವರು ಆಶ್ರಯ ತಾಣಗಳತ್ತ ಓಡುವಾಗ ಬಿದ್ದು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಬೀರ್ಶೆಬಾದ ಸೊರೊಕಾ ಆಸ್ಪತ್ರೆಯಲ್ಲಿ ಸುಮಾರು 14 ಜನರಿಗೆ ಚಿಕಿತ್ಸೆ ನೀಡಲಾಗಿದೆ..

ಕ್ಷಿಪಣಿಯು ವಸತಿ ಕಟ್ಟಡದ ಮೇಲೆ ಬಿದ್ದಿದ್ದು, ಹತ್ತಿರದ ಹಳೆಯ ಮನೆಗಳು ಕುಸಿದಿವೆ. ಕಟ್ಟಡದ ನಿವಾಸಿಗಳು ಆಶ್ರಯ ತಾಣಗಳಲ್ಲಿದ್ದರು. ಆದ್ದರಿಂದ, ಹೊರಗೆ ಉಳಿದಿದ್ದ ಹುಡುಗನನ್ನು ಹೊರತುಪಡಿಸಿ ಬೇರೆಯವರಿಗೆ ಹೆಚ್ಚಿನ ಗಾಯಗಳಾಗಿಲ್ಲ ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ..

ಇರಾನ್‌ನ ಖಂಡಾಂತರ ಕ್ಷಿಪಣಿ ತಡೆಯುವಲ್ಲಿ ವಾಯುರಕ್ಷಣಾ ವ್ಯವಸ್ಥೆ ವಿಫಲವಾಗಿದ್ದು, ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ತಿಳಿಸಿದೆ. ಆದರೂ ವಾಯು ರಕ್ಷಣಾ ಪಡೆಗಳು ಖಂಡಾಂತರ ಕ್ಷಿಪಣಿಯನ್ನು ಗುರುತಿಸಿದ್ದವು. ಆದರೆ, ಪ್ರತಿಬಂಧಕಗಳು ಹೊಡೆದುರುಳಿಸುವಲ್ಲಿ ವಿಫಲವಾದವು ಎಂದು ಇಸ್ರೇಲಿ ಸೇನೆ ಹೇಳಿದೆ.

ಇಸ್ರೇಲ್ ಪರಮಾಣು ಕೇಂದ್ರವಿರುವ ಪಟ್ಟಣದಲ್ಲೇ ಈ ದಾಳಿ ನಡೆದಿದ್ದು, ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ಐಎಇಎ ಗರಿಷ್ಠ ಮಿಲಿಟರಿ ಸಂಯಮಕ್ಕೆ ಕರೆ ನೀಡಿದೆ.

'ಇಸ್ರೇಲ್‌ನ ಪರಮಾಣು ಕೇಂದ್ರವಿರುವ ಡಿಮೋನಾ ಪಟ್ಟಣದಲ್ಲಿ ಕ್ಷಿಪಣಿ ದಾಳಿ ನಡೆದಿರುವ ಬಗ್ಗೆ ಐಎಇಎಗೆ ತಿಳಿದಿದೆ. ಆದರೆ, ಪರಮಾಣು ಸಂಶೋಧನಾ ಕೇಂದ್ರಕ್ಕೆ ಹಾನಿಯಾದ ಯಾವುದೇ ಸೂಚನೆ ಸಿಕ್ಕಿಲ್ಲ'ಎಂದು ಐಎಇಎ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಟಾಂಜ್ ಪರಮಾಣು ತಾಣದ ಮೇಲೆ ಈ ಹಿಂದೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಡಿಮೋನಾ ಪಟ್ಟಣವನ್ನು ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ಹೇಳಿದೆ.

ಡಿಮೋನಾ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯ ಭಾರತ ಮಊಲದ-ಯಹೂದಿಗಳಿದ್ದಾರೆ. ಬಹುತೇಕರು ಮಹಾರಾಷ್ಟ್ರದವರು. ಭಾರತದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದಾರೆ. ಹಾಗಾಗಿಯೇ ಇದನ್ನು ಲಿಟಲ್ ಇಂಡಿಯಾ ಎಂದು ಕರೆಯಲಾಗುತ್ತದೆ.

ಪಟ್ಟಣದಾದ್ಯಂತ ಭಾರತೀಯರ ಅಂಗಡಿಗಳು ಹರಡಿಕೊಂಡಿವೆ. ಅವರು ಮರಾಠಿ ಭಾಷೆಯನ್ನು ಮಾತನಾಡುತ್ತಾರೆ. ಪಟ್ಟಣದ ಜನಸಂಖ್ಯೆಯ ಸುಮಾರು ಶೇ 30 ರಷ್ಟು(7,500 ಮಂದಿ) ಭಾರತೀಯರಿದ್ದು, ಪ್ರಬಲ ಸಮುದಾಯವೆನಿಸಿದೆ.

ಈ ಪಟ್ಟಣದಲ್ಲಿ ಕ್ರಿಕೆಟ್ ಜನಪ್ರಿಯವಾಗಿದೆ. ಭಾರತೀಯ ತಿನಿಸುಗಳಾದ ಸೋನ್‌ಪಪ್ಡಿ, ಗುಲಾಬ್ ಜಾಮೂನ್, ಪೆಪ್ರಿ ಚಾಟ್, ಭೇಲ್‌ಪುರಿ ಮಾರಾಟ ಮಾಡುವ ಭಾರತೀಯ ಮಳಿಗೆಗಳನ್ನು ಕಾಣಬಹುದಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries