ಕುಂಬಳೆ: ಸೀತಾಂಗೋಳಿಯ ಸಂತೋಷ್ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ಬಿನ ಸುವರ್ಣ ಮಹೋತ್ಸವ ಸಮಾರಂಭ ಮುಂದಿನ ವರ್ಷ ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕ್ಲಬ್ಬಿನ ಮಹಿಳಾ ಘಟಕವನ್ನು ರಚಿಸಲಾಯಿತು.
ಸಂಘದ ಅಧ್ಯಕ್ಷ, ವಕೀಲ ಥಾಮಸ್ ಡಿ. ಸೋಜಾ ಅಧ್ಯಕ್ಷತೆ ವಹಿಸಿದ್ದರು. ಸುವರ್ಣಮಹೋತ್ಸವ ಆಚರಿಸುತ್ತಿರುವ ಕ್ಲಬ್‍ನ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಥಾಮಸ್ ಡಿ.ಸೋಜ ಸಮಗ್ರ ಮಾಹಿತಿ ನೀಡಿದರು. ಕ್ಲಬ್ ಪದಾಧಿಕಾರಿಗಳಾದ ಸತೀಶ್ ರಾಜ್, ರಂಜಿತ್ ಶೆಟ್ಟಿ, ಮೋಹನ ಮೊದಲಾದವರು ಭಾಗವಹಿಸಿದರು. ಹಿರಿಯ ಸದಸ್ಯ ಕೆ. ಮಹಾಲಿಂಗ ಸ್ವಾಗತಿಸಿದರು. ಉಪಾಧ್ಯಕ್ಷ ಅಪ್ಪಣ್ಣ ವಂದಿಸಿದರು. ನೂತನವಾಗಿ ರಚನೆಯಾದ ಮಹಿಳಾ ಘಟಕದ ಪ್ರಧಾನ ಸಂಚಾಲಕಿಯಾಗಿ ವನಿತಾ, ಸಹ ಸಂಚಾಲಕಿಯಾಗಿ ಅನಿತಾ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಇಫ್ತಾರ್ ಕೂಟವನ್ನುಆ ಯೋಜಿಸಲಾಯಿತು.



