HEALTH TIPS

ಕಚ್ಚಾ ತೈಲ ಸಾಗಣೆ ಜಾಲದ ಮೇಲೆ ಗ್ರಹಣ

ಟೆಹರಾನ್​: ಮಧ್ಯಪ್ರಾಚ್ಯದ ಪರ್ಷಿಯನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ನಡುವೆ ಇರುವ ಕಿರಿದಾದ ಕಡಲ ಕಾರಿಡಾರ್ ಅನ್ನು ಹಾಮುಜ್ ಜಲಸಂಧಿ ಎನ್ನಲಾಗುತ್ತೆ. ಇದು ಸುಮಾರು 100 ಮೈಲಿ ಉದ್ದವಿದ್ದು ಅತ್ಯಂತ ಕಿರಿದಾದ ಬಿಂದುವಿನಲ್ಲಿ ಸುಮಾರು 21 ಮೈಲು ಅಗಲವಿದೆ. ಈ ಜಲಸಂಧಿಯಲ್ಲಿ ಸಮುದ್ರ ಆಳವಾಗಿಲ್ಲ.

ಹಡಗುಗಳು ಸಾಗುವ ಹಾದಿಗಳು ಕೇವಲ 2 ಮೈಲಿಯಷ್ಟು ಅಗಲವಿದೆ. ಹಾಗಾಗಿ ಈ ಜಲಸಂಧಿಯಲ್ಲಿ ಹಡಗುಗಳ ದಟ್ಟಣೆ ಹೆಚ್ಚಿರುತ್ತದೆ. ಈ ಜಲಸಂಧಿ ಇರಾನ್ ಮತ್ತು ಯುಎಇ, ಓಮನ್ ನಡುವೆ ಇದ್ದು, ಪ್ರಮುಖ ತೈಲ ಉತ್ಪಾದನಾ ದೇಶಗಳಾದ ಸೌದಿ ಅರೇಬಿಯಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್, ಇರಾಕ್, ಕತಾರ್, ಬಹ್ರೇನ್ ದೇಶಗಳು ತೈಲ ಮತ್ತು ಎಲ್​ಎನ್​ಜಿ ಸಾಗಣಿಕೆಗೆ ಇದೇ ಮಾರ್ಗವನ್ನು ಅವಲಂಬಿಸಿವೆ.
ಈ ಜಲಸಂಧಿಯ ಮೂಲಕ ಪ್ರತಿದಿನ 20 ಮಿಲಿಯನ್ ಬ್ಯಾರೆಲ್​ಗಿಂತ ಹೆಚ್ಚಿನ ಕಚ್ಚಾತೈಲ ಹಾದು ಹೋಗುತ್ತದೆ. ಅಂದರೆ ಜಗತ್ತಿನ ಒಟ್ಟು ಕಚ್ಚಾತೈಲದ ಶೇಕಡ 20ರಿಂದ 25ರಷ್ಟು ಈ ಮಾರ್ಗದ ಮೂಲಕ ಹಾದು ಹೋಗುತ್ತದೆ. ಹಾಗಾಗಿ ಈ ಜಲಸಂಧಿಯನ್ನು ಬಂದ್ ಮಾಡಿದರೆ ಮಧ್ಯಪ್ರಾಚ್ಯದ ದೇಶಗಳ ತೈಲವನ್ನು ಪರ್ಷಿಯನ್ ಕೊಲ್ಲಿಯಿಂದ ಹೊರಗೆ ಸಾಗಿಸಲು ಅವಕಾಶವೇ ಇಲ್ಲದಂತಾಗುತ್ತದೆ.100 ಡಾಲರ್​ಗೆ ಏರಿಕೆ?ಹಾಮುಜ್ ಜಲಸಂಧಿ ಬಂದ್ ಆದರೆ ತೈಲ ಪೂರೈಕೆ ಸರಪಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾಗುತ್ತದೆ. ಇರಾನ್ ಈಗಾಗಲೇ ಹಾಮುಜ್ ಜಲಸಂಧಿಯನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಕಚ್ಚಾತೈಲ ದರ ಬ್ಯಾರಲ್​ಗೆ 100 ಡಾಲರ್​ಗೆ ಹೆಚ್ಚುವ ಸಾಧ್ಯತೆ ಇದೆ.ತೈಲ ಟ್ಯಾಂಕರ್ ಮೇಲೆ ದಾಳಿಹಾಮುಜ್ ಜಲಸಂಧಿಯ ಮೂಲಕ ಒಮನ್ ಕಡಲ ತೀರದಲ್ಲಿ ಸಾಗುತ್ತಿದ್ದ ತೈಲ ಟ್ಯಾಂಕರ್ ಮೇಲೆ ಭಾನು ವಾರ ಇರಾನ್ ದಾಳಿ ನಡೆಸಿದ್ದು, ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಾಳಿ ನಡೆದಾಗ ಹಡಗಿನಲ್ಲಿ 15 ಭಾರತೀಯರು ಸೇರಿ 20 ಸಿಬ್ಬಂದಿ ಇದ್ದರು. ದಾಳಿಯಲ್ಲಿ ನಾಲ್ವರು ಸಿಬ್ಬಂದಿಗೆ ಗಾಯವಾಗಿದ್ದು, ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries