ಕೀವ್: ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮುಂದಿನ ಹಂತದ ಮಾತುಕತೆಗೆ ಉಕ್ರೇನ್ ಸಿದ್ಧವಿದೆ' ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಸಭೆಯಲ್ಲಿ ಅಮೆರಿಕದ ರಾಯಭಾರಿಗಳಾದ ಸ್ಟೀವ್ ವಿಟ್‌ಕಾಫ್ ಮತ್ತು ಜೇರೆಡ್ ಕುಶ್ನರ್ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದು, ರಷ್ಯಾವು ತನ್ನ ನಿಯೋಗವನ್ನು ಕಳುಹಿಸಲು ನಿರಕಾರಿಸಿದೆ.
'ನಾವು ಅಮೆರಿಕದ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇವೆ. ರಷ್ಯಾದ ನಿಯೋಗವು ಅಮೆರಿಕಕ್ಕೆ ಬರುವುದನ್ನು ಖಚಿತಪಡಿಸಬೇಕು' ಎಂದು ಝೆಲೆನ್‌ಸ್ಕಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

