HEALTH TIPS

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸಮಸ್ಯೆ ಇದೆ-ಆಂಟೊನಿಯೊ ಗುಟೆರಸ್‌

 ವಿಶ್ವಸಂಸ್ಥೆ: 'ಭದ್ರತಾ ಮಂಡಳಿಯಲ್ಲಿ ಸಮಸ್ಯೆ ಇದೆ ಎಂಬುದನ್ನು ಗುರುತಿಸುವ ಅಗತ್ಯವಿದೆ. ಈಗಿನ ಭದ್ರತಾ ಮಂಡಳಿಯು ಪ್ರಸ್ತುತ ಜಗತ್ತನ್ನು ಪ್ರತಿನಿಧಿಸುವುದಿಲ್ಲ. ಕಾಯಂ ಸದಸ್ಯ ರಾಷ್ಟ್ರಗಳು ತಮ್ಮ ವೀಟೊ ಅಧಿಕಾರವನ್ನು ಬಳಸಿ ಸಂಘರ್ಷಗಳನ್ನು ನಿಲ್ಲಿಸಲು ಅವಕಾಶ ನೀಡುತ್ತಿಲ್ಲ' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರು ಮಾರ್ಮಿಕವಾಗಿ ಹೇಳಿದರು. 


ಬೈರೂತ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಈಗಿನ ಭದ್ರತಾ ಮಂಡಳಿಯು 1945ರ ನಂತರದ ಜಗತ್ತನ್ನು ಪ್ರತಿನಿಧಿಸುತ್ತದೆ. ಅದು ಈಗಿನ ರಾಜಕೀಯ ಹಾಗೂ ಭೌಗೋಳಿಕ ವಾಸ್ತವ ಸಂಗತಿಗಳನ್ನು ಪ್ರತಿಬಿಂಬಿಸುವುದಿಲ್ಲ' ಎಂದರು.

ಭದ್ರತಾ ಮಂಡಳಿಯಲ್ಲಿ 15 ಸದಸ್ಯ ರಾಷ್ಟ್ರಗಳಿವೆ. ಈ ಪೈಕಿ ಚೀನಾ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್‌ ಹಾಗೂ ಅಮೆರಿಕ 5 ಕಾಯಂ ಸದಸ್ಯ ರಾಷ್ಟ್ರಗಳು. ಇವೆಲ್ಲ ಏಷ್ಯಾ, ಯೂರೋಪ್‌, ಅಮೆರಿಕ ಪ್ರತಿನಿಧಿಸುತ್ತವೆ. ಆದರೆ ಆಫ್ರಿಕಾ ಹಾಗೂ ಲ್ಯಾಟಿನ್‌ ಅಮೆರಿಕದಿಂದ ಯಾವುದೇ ರಾಷ್ಟ್ರಗಳು ಕಾಯಂ ಸದಸ್ಯರಾ‌ಗಿಲ್ಲ. ಜಾಗತಿಕ ಸಂಪತ್ತು ಹಾಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಏಷ್ಯಾದಿಂದಲೂ ಒಂದೇ ರಾಷ್ಟ್ರ ಕಾಯಂ ಸದಸ್ಯತ್ವ ಹೊಂದಿದೆ' ಎಂದು ಅವರು ಹೇಳಿದರು.

ಹೀಗಾಗಿ ಭದ್ರತಾ ಮಂಡಳಿಯ ವೀಟೊಗಳು ನ್ಯಾಯಸಮ್ಮತದ ಕೊರತೆ ಹಾಗೂ ದಕ್ಷತೆಯ ಸಮಸ್ಯೆಯನ್ನು ಹೊಂದಿವೆ ಎಂದು ಟೀಕಿಸಿದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries