HEALTH TIPS

ಸುಧಾರಿತ ಲಘು ಹೆಲಿಕಾಪ್ಟರ್‌: ಎಚ್‌ಎಎಲ್‌ ಜೊತೆಗೆ ರಕ್ಷಣಾ ಇಲಾಖೆ ಒಪ್ಪಂದ

ನವದೆಹಲಿ: ಆರು ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ಹಾಗೂ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳ ಖರೀದಿ ಸಂಬಂಧ ₹5,083 ಕೋಟಿ ಮೊತ್ತದ ಒಪ್ಪಂದಕ್ಕೆ ರಕ್ಷಣಾ ಇಲಾಖೆಯು ಮಂಗಳವಾರ ಎಚ್‌ಎಎಲ್‌ನೊಂದಿಗೆ ಸಹಿ ಹಾಕಿದೆ.

ಎಎಲ್‌ಎಚ್‌ ಎಂಕೆ-2 ಹೆಲಿಕಾ‍ಪ್ಟರ್‌ಗಳನ್ನು ಭಾರತೀಯ ತಟರಕ್ಷಕ ಪಡೆಗೆ ನಿಯೋಜಿಸಲು ಖರೀದಿ ಪ್ರಕ್ರಿಯೆ ನಡೆದಿದ್ದು, 'ಶಿಟಿಲ್‌' ಕ್ಷಿಪಣಿಗಳನ್ನು ಭಾರತೀಯ ಯುದ್ಧ ನೌಕೆಗಳಲ್ಲಿ ನಿಯೋಜಿಸಲಾಗುತ್ತದೆ.

'ಕಾರ್ಯಾಚರಣಾ ಉಪಕರಣಗಳು, ಎಂಜಿನಿಯರಿಂಗ್‌ ಬೆಂಬಲ ಪ್ಯಾಕೇಜ್‌ ಹಾಗೂ ಸಾಗಣೆ ನೆರವಿನ ಉದ್ದೇಶದೊಂದಿಗೆ ಎಎಲ್‌ಎಚ್‌ ಎಂಕೆ-2 ಹೆಲಿಕಾಪ್ಟರ್‌ಗಳ ಖರೀದಿಗೆ ₹2901 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ. ಎರಡು ಎಂಜಿನ್‌ಗಳನ್ನು ಹೊಂದಿರುವ ವಿಮಾನವು ಕಡಲಿನ ಭದ್ರತೆ ಒದಗಿಸುತ್ತಿರುವ ಹೆಲಿಕಾಪ್ಟರ್‌ಗಳಲ್ಲಿಯೇ ಅತ್ಯುನ್ನತ ಮಟ್ಟದಾಗಿದೆ. ಈ ಕಾಪ್ಟರ್‌ಗಳ ಸೇರ್ಪಡೆಯಿಂದ ಭಾರತೀಯ ಕಡಲ ರಕ್ಷಣೆಗೆ ಮತ್ತಷ್ಟು ಬಲ ತುಂಬಲಿದೆ. ಅದೇ ರೀತಿ, ಕ್ಷಿಪಣಿಗಳ ಸೇರ್ಪಡೆಯಿಂದ ವಾಯುರಕ್ಷಣೆಯಲ್ಲಿ ಮತ್ತಷ್ಟು ಸದೃಢವಾಗಲಿದೆ' ಎಂದು ರಕ್ಷಣಾ ಇಲಾಖೆಯು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries