ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸುತ್ತಿರುವ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ನಡೆಸುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಈ ಕ್ರಮ ತೆಗೆದುಕೊಂಡಿದೆ.
''ಬಹರೈನ್, ಇರಾನ್, ಕುವೈತ್, ಒಮಾನ್, ಖತರ್, ಸೌದಿ ಅರೇಬಿಯ ಮತ್ತು ಯುಎಇಯನ್ನು ಒಳಗೊಂಡ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಮಾರ್ಚ್ 5 ಮತ್ತು 6ರಂದು ನಡೆಯಬೇಕಾಗಿದ್ದ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲು ಮಂಡಳಿಯು ನಿರ್ಧರಿಸಿದೆ'' ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಮ್ ಭಾರದ್ವಾಜ್ ತಿಳಿಸಿದ್ದಾರೆ.
ನೂತನ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು ಹಾಗೂ ಮಾರ್ಚ್ 5ರಂದು ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ, ಇನ್ನುಳಿದ ಪರೀಕ್ಷೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುಗುವು ಎಂದು ಭಾರದ್ವಾಜ್ ಹೇಳಿದರು.
ಇದಕ್ಕೂ ಮೊದಲು, ಈ ವಲಯದಲ್ಲಿ ಮಾರ್ಚ್ 2ರಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮಂಡಳಿಯು ರವಿವಾರ ಮುಂದೂಡಿತ್ತು.

