ಉಪ್ಪಳ: ಇತಿಹಾಸ ಪ್ರಸಿದ್ಧ ಕುಂಬಳೆ ಸೀಮೆಯ ಕೊಡ್ಯಮೆ ಅಂತಲ ಶ್ರೀ ಧರ್ಮ ಚಾವಡಿ ಧರ್ಮ ದೈವಗಳ ವಾರ್ಷಿಕ ನೇಮೋತ್ಸವ ಮೇ 2 ರಿಂದ 7ರ ತನಕ ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಬಾಯಾರು ಓಂ ಶ್ರೀ ಶಕ್ತಿಪೀಠ ಶ್ರೀ ಕ್ಷೇತ್ರ ಬೊಳ್ಳಿಮಲೆ ಇಲ್ಲಿನ ಶ್ರೀ ಶಾರದತನಯ ಬಾಯಾರು ಅವರು ಬಿಡುಗಡೆಗೊಳಿಸಿ ಮಾತನಾಡಿದರು. ಸಮುದಾಯವು ಅಚಲ ದೈವಭಕ್ತಿ ಆರಾಧನೆಗೆ ಮೂಲ ಸ್ವರೂಪವಾಗಿದೆ. ಪಾರಂಪರಿಕ ದೈವಿಕ ಶಕ್ತಿಗಳ ಆರಾಧನೆಯಿಂದ ನಾಡಿಗೆ ಕ್ಷೇಮವುಂಟಾಗಲಿ. ಆರಾಧನೆಯ ಮೂಲಕ ಧರ್ಮಜಾಗೃತಿ ಉಂಟಾಗಬೇಕಿದೆ. ಯುವಸಮುದಾಯವು ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿಶ್ರದ್ಧೆಯಿಂದ ಪಾಲ್ಗೊಳ್ಳುವಂತೆ ಹಿರಿಯರ ಪ್ರೋತ್ಸಾಹವಿರಬೇಕು ಎಂದರು.
ಕೊಡ್ಯಮೆ ಅಂತಲ ಶ್ರೀ ಧರ್ಮ ಚಾವಡಿಯ ಸೇವಾ ಸಮಿತಿ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು, ಆಶಾಶಾರದಾತನಯ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

.jpg)
