ಉಪ್ಪಳ: ಇಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಉಪ್ಪಳದ ಪೆಟ್ರೋಲ್ ಪಂಪ್ ಕಾರ್ಮಿಕ ಮೃತಪಟ್ಟಿದ್ದಾರೆ. ಮಂಗಳೂರು ಅಮರ್‍ಆಳ್ವ ರಸ್ತೆಯ ಶಾಂತಾ ಆಳ್ವ ಕಂಪೌಂಡ್ ನಿವಾಸಿ ಮಹೇಶ್-ರಾಧಾ ದಂಪತಿ ಪುತ್ರ ಆಕಾಶ್(25)ಮೃತಪಟ್ಟ ಯುವಕ.
ಕಳೆದ ಒಂದು ವರ್ಷದಿಂದ ಆರಿಕ್ಕಾಡಿ ಕಾರ್ಲೆಯಲ್ಲಿನ ತನ್ನ ತಾಯಿಯ ತವರುಮನೆಯಲ್ಲಿದ್ದುಕೊಂಡು ಪೆಟ್ರೋಲ್ ಪಂಪಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಮಾ. 6ರಂದು ಇಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸಹಜ ಸಾವಿನ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

