HEALTH TIPS

ಯುವತಿಯರ ಮೋರ್ಫ್‍ಗೊಳಿಸಿದ ನಗ್ನ ಚಿತ್ರ ರವಾನೆ-ಆರೋಪಿ ಬಂಧನ

ಕಾಸರಗೋಡು: ಯುವತಿಯರ ಪೋಟೋ ಸಂಗ್ರಹಿಸಿ ಇದನ್ನು ಮೋರ್ಫ್ ಮಾಡಿ ನಗ್ನ ಚಿತ್ರಗಳನ್ನಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಯುವಕನನ್ನು ಕಾಸರಗೋಡು ಅಪರಾಧ ಪತ್ತೆ ವಿಶೇಷ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಇರಿಯಣ್ಣಿ ಬೇಪು ನಿವಾಸಿ ಪಿ. ಅನೂಪ್ (24) ಬಂಧಿತ. ಕಾಸರಗೋಡು ಸೈಬರ್ ಕ್ರೈಂ ಪೆÇಲೀಸರು ನಡಿಸಿದ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದ್ದು,  ಕೃತ್ಯಕ್ಕೆ ಬಳಸಿದ ಫೆÇೀನ್, ಹಾರ್ಡ್ ಡಿಸ್ಕ್ ವಶ ಪಡಿಸಲಾಗಿದೆ.

ಮಾರ್ಚ್ 11ರಿಂದ 16ರ ಮಧ್ಯೆ ಹಲವು ಯುವತಿಯರ ಚಿತ್ರಗಳನ್ನು ಸಂಗ್ರಹಿಸಿಕೊಂಡ ಈತ ಅವನ್ನು ಮೋರ್ಫ್ ಮಾಡಿ ನಗ್ನ ಚಿತ್ರಗಳನ್ನಾಗಿಸಿ ಅನಂತರ ಟೆಲಿಗ್ರಾಂ ನಲ್ಲಿ ಹಂಚಿಕೊಂಡಿದ್ದನು. ಈ ಕುರಿತು ಸಂತ್ರಸ್ತ ಯುವತಿಯರು ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿ, ಇನ್ಸ್‍ಪೆಕ್ಟರ್ ಎಚ್. ಮುಹ್ಮದ್ ಖಾನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಅರೋಪಿಯನ್ನು ಬಂಧಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries