HEALTH TIPS

ಜಿನ್ನಾ ಕುರಿತ ಪಠ್ಯ ಕೈಬಿಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‌ ಆಗ್ರಹ

ಜಮ್ಮು: ಇಲ್ಲಿನ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯ ರಾಜಶಾಸ್ತ್ರ ಪಠ್ಯಕ್ರಮದಲ್ಲಿರುವ ಪಾಕಿಸ್ತಾನದ ಮಾಜಿ ಆಧ್ಯಕ್ಷ ಮೊಹಮ್ಮದ್‌ ಅಲಿ ಜಿನ್ನಾ ಕುರಿತ ಪಠ್ಯವನ್ನು ಕೈಬಿಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‌(ಎಬಿವಿಪಿ) ಶುಕ್ರವಾರ ಪ್ರತಿಭಟನೆ ನಡೆಸಿದೆ.

ವಿ.ವಿಯ ಆವರಣದಲ್ಲಿ ಜಮಾಯಿಸಿದ್ದ ಎಬಿವಿಪಿ ಕಾರ್ಯಕರ್ತರು, ರಾಷ್ಟ್ರೀಯ ಶಿಕ್ಷಣ ನೀತಿ 2020ರಡಿಯಲ್ಲಿ ಪರಿಷ್ಕೃತಗೊಂಡ ಪಠ್ಯಕ್ರಮದಲ್ಲಿ ಜಿನ್ನಾ ಕುರಿತ ಪಠ್ಯ ಸೇರಿಸಿರುವುದಕ್ಕೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು ಮತ್ತು ಜಿನ್ನಾ ಅವರ ಚಿತ್ರವಿದ್ದ ಪೋಸ್ಟರ್‌ಗಳನ್ನು ಹರಿದು ಹಾಕಿದರು. ಪಠ್ಯವನ್ನು ಕೈಬಿಡದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

'ದೇಶ ವಿಭಜನೆಗೆ ಕಾರಣರಾದವರ ಪಠ್ಯವನ್ನು ಸೇರಿಸುವ ಮೂಲಕ ರಾಷ್ಟ್ರದ ಜನರ ಭಾವನೆಗಳಿಗೆ ಗಾಸಿ ಉಂಟು ಮಾಡುವುದು ಸರಿಯಲ್ಲ. ವಿ.ವಿಯ ನಿರ್ಧಾರ ಸ್ವೀಕಾರಾರ್ಹವಲ್ಲ ಎಂದು ಎಬಿವಿಪಿಯ ಪ್ರಮುಖರು ತಿಳಿಸಿದ್ದಾರೆ.

ಪಠ್ಯಕ್ರಮವನ್ನು ಸಮರ್ಥಿಸಿಕೊಂಡ ವಿ.ವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಬಾಲ್‌ಜೀತ್‌ ಸಿಂಗ್‌ ಮಾನ್‌, 'ಶೈಕ್ಷಣಿಕ ದೃಷ್ಟಿಯಿಂದ ಜಿನ್ನಾ ಪಠ್ಯವನ್ನು ಸೇರಿಸಲಾಗಿದೆ ಮತ್ತು ವಿಶವಿದ್ಯಾಲಯಗಳ ಅನುದಾನ ಆಯೋಗದ ನೀತಿಯನುಸಾರ ದೇಶದಾದ್ಯಂತ ಎಲ್ಲ ವಿ.ವಿಗಳು ಪಾಲಿಸುತ್ತಿರುವ ಪಠ್ಯಕ್ರಮವನ್ನೇ ನಾವೂ ಅನುಷ್ಠಾನ ಮಾಡಿದ್ದೇವೆ' ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries