HEALTH TIPS

ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದ್ವೇಷ ಭಾಷಣದ ಅರ್ಜಿ ತಿರಸ್ಕಾರ: SC

ನವದೆಹಲಿ: ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದ್ವೇಷ ಭಾಷಣ ಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇಂತನ ಬೆಳವಣಿಗೆಯನ್ನು 'ಬ್ರಾಹ್ಮಣಫೋಬಿಯಾ' ಎಂದು ಬಣ್ಣಿಸಿದೆ.

ಮಹಾಲಿಂಗಂ ಬಾಲಾಜಿ ಅವರು ವಾದ ಮಂಡಿಸಿದ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಉಜ್ಜಲ್‌ ಭುಯಾನ್‌ ನೇತೃತ್ವದ ನ್ಯಾಯಪೀಠವು, ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಬಾರದು ಎಂದು ತಿಳಿಸಿದೆ.

'ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡುವುದನ್ನು ಒಪ್ಪುವುದಿಲ್ಲ. ಇದು ಶಿಕ್ಷಣ, ಬೌದ್ಧಿಕ ಬೆಳವಣಿಗೆ ಹಾಗೂ ಸಹಿಷ್ಣುತೆಯನ್ನು ಒಳಗೊಂಡಿದೆ. ಎಲ್ಲರೂ ಭ್ರಾತೃತ್ವವನ್ನು ಪಾಲಿಸಿದರೆ, ಎಲ್ಲಿಯೂ ದ್ವೇಷ ಭಾಷಣ ಇರುವುದಿಲ್ಲ' ಎಂದು ನ್ಯಾಯಮೂರ್ತಿ ನಾಗರತ್ನ ತಿಳಿಸಿದ್ದಾರೆ.

ದ್ವೇಷ ಭಾಷಣದ ವಿಚಾರದಲ್ಲಿ ಒಂದು ಸಮುದಾಯಕ್ಕೆ ಮಾತ್ರ ಏಕೆ ರಕ್ಷಣೆ ಕೋರಲಾಗಿದೆ ಎಂದು ಈ ವೇಳೆ ಅರ್ಜಿದಾರರನ್ನು ಪ್ರಶ್ನಿಸಿದರು.

ಅರ್ಜಿದಾರರು ಸ್ವತಃ ಅರ್ಜಿ ಹಿಂಪಡೆಯಲು ಮಾಡಿದ ಮನವಿಗೆ ನ್ಯಾಯಾಲಯವು ಸಮ್ಮತಿ ನೀಡಿತು.

'ಅರ್ಜಿದಾರರು ಅರ್ಜಿಯನ್ನು ಹಿಂದಕ್ಕೆ ಪಡೆಯಲು ಒಪ್ಪಿದ್ದಾರೆ. ಅವರು ಸಲ್ಲಿಕೆಯನ್ನು ದಾಖಲೆಯಲ್ಲಿ ಇರಿಸಲಾಗಿದೆ. ಅರ್ಜಿ ಹಿಂದಕ್ಕೆ ಪಡೆದಿರುವ ಕಾರಣ, ಅರ್ಜಿ ವಜಾಗೊಳಿಸಲಾಗಿದೆ' ಎಂದು ನ್ಯಾಯಪೀಠ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries