HEALTH TIPS

ಮಲಯಾಳಂ ಅಧಿಕೃತ ಭಾಷೆ: ವಿವಾದದ ನಂತರ ರಾಜ್ಯಪಾಲರು ಮಸೂದೆಗೆ ಅನುಮೋದನೆ: ಗಡಿನಾಡಿಗರ ಮೇಲಿನ ಪರಿಣಾಮಗಳೇನು?

ತಿರುವನಂತಪುರಂ: ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಮಲಯಾಳಂ ಭಾಷಾ ಮಸೂದೆಗೆ ನಿನ್ನೆ ಅನುಮೋದನೆ ನೀಡಿದ್ದಾರೆ. ಕಳೆದ ಅಕ್ಟೋಬರ್‍ನಲ್ಲಿ ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟ ಈ ಮಸೂದೆಗೆ ದೀರ್ಘ ಕಾಯುವಿಕೆಯ ನಂತರ ರಾಜ್ಯಪಾಲರು ಸಹಿ ಹಾಕಿದ್ದಾರೆ. 


ಸರ್ಕಾರವು 2015 ರಲ್ಲಿ ಅಂತಹ ಮಸೂದೆಯನ್ನು ರೂಪಿಸಿದ್ದರೂ, ಆ ಸಮಯದಲ್ಲಿ ಅದು ತೀವ್ರ ತೊಂದರೆಗಳನ್ನು ಎದುರಿಸಿತು. ಆಗಿನ ರಾಜ್ಯಪಾಲ ನ್ಯಾಯಮೂರ್ತಿ ಪಿ. ಸದಾಶಿವಂ ಮತ್ತು ನಂತರ ರಾಷ್ಟ್ರಪತಿಗಳು ಮಸೂದೆಯನ್ನು ಹಿಂದಕ್ಕೆ ಕಳುಹಿಸಿದ್ದರು. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಉಲ್ಲೇಖಿಸಿ ನೆರೆಯ ರಾಜ್ಯವಾದ ಕರ್ನಾಟಕ ಮಸೂದೆಯನ್ನು ವಿರೋಧಿಸಿದ್ದು ಕೂಡ ಈ ನಿರ್ಧಾರದ ಮೇಲೆ ಪರಿಣಾಮ ಬೀರಿತು.

ಈ ಹಿನ್ನೆಲೆಯಲ್ಲಿ ಸರ್ಕಾರ 2025 ರಲ್ಲಿ ಹೊಸ ಮಸೂದೆಯನ್ನು ಪರಿಚಯಿಸಿತು. ರಾಜ್ಯಪಾಲರು ಇದಕ್ಕೆ ಸಹಿ ಹಾಕುವಲ್ಲಿ ವಿಳಂಬ ಮಾಡಿರುವುದು ಕಳವಳಕ್ಕೆ ಕಾರಣವಾಗಿತ್ತು. ಕೇರಳದ ಪ್ರಮುಖ ಬರಹಗಾರರ ಗುಂಪು ಮಸೂದೆಗೆ ಅನುಮೋದನೆ ಪಡೆಯಲು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿತ್ತು.

ಮಲೆಯಾಳಂ ಭಾಷಾ ಮಸೂದೆಯ ಮುಖ್ಯಾಂಶಗಳು: 

ತಿರುವನಂತಪುರ: ರಾಜ್ಯಪಾಲರ ಅಂಕಿತದೊಂದಿಗೆ ಕಾಯ್ದೆ ರೂಪದಲ್ಲಿ ಜ್ಯಾರಿಗೊಂಡಿರುವ ಕೇರಳ ಮಲೆಯಾಳಂ ಭಾಷಾ ಮಸೂದೆ-2026ಯಲ್ಲಿ ಒಳಗೊಂಡಿರುವ ಪ್ರಧಾನ ಅಂಶಗಳು ಇಂತಿವೆ-

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಯಿಂದ 10ನೇ ತರಗತಿ ತನಕ ಮಲೆಯಾಳಂನ್ನು ಕಡ್ಡಾಯವಾಗಿ ಪ್ರಥಮ ಭಾಷೆಗಳನ್ನಾಗಿಸಲಾಗುವುದು. ಇತರ ಮಾತೃ ಭಾಷಾ ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯ ಹೊರತಾಗಿ ಮಲೆಯಾಳಂ ಭಾಷೆ ಕಲಿಯಲು ಅವಕಾಶ ನೀಡಲಾಗುವುದು. ಮಲೆಯಾಳಂ ಮಾತೃ ಭಾಷೆಯಲ್ಲದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪಠ್ಯ ಯೋಜನೆ ಪ್ರಕಾರ ಕೇರಳದಲ್ಲಿ ಲಭ್ಯವಿರುವ ಇತರ ಭಾಷೆಗಳನ್ನು ಆರಿಸಬಹುದಾಗಿದೆ. ಹೊರ ರಾಜ್ಯಗಳು ಹಾಗೂ ವಿದೇಶಗಳಿಂದ ಕೇರಳಕ್ಕೆ ಬಂದು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ 9,10 ಮತ್ತು ಹೈಯರ್ ಸೆಕೆಂಡರಿ ಮಟ್ಟದ ಪರೀಕ್ಷೆಗಳಲ್ಲಿ ಮಲೆಯಾಳಂ ಭಾಷೆ ಕಡ್ಡಾಯವಲ್ಲ..

ರಾಜ್ಯ ಸರ್ಕಾರದ ಎಲ್ಲಾ ಸಂಸ್ಥೆಗಳು ಮತ್ತು ಅಧಿಕಾರಿಗಳ ನಾಮಫಲಕಗಳು ಇನ್ನು ಮಲೆಯಾಳದಲ್ಲಿರಲಿದೆ. ಸರ್ಕಾರ ಹೊರಡಿಸುವ ಎಲ್ಲಾ ಸುತ್ತೋಲೆ, ಅಧಿಸೂಚನೆ, ನೋಟೀಸುಗಳನ್ನು ಮಲೆಯಾಳಂನಲ್ಲೇ ಹೊರಡಿಸಲಾಗುವುದು. ಸರ್ಕಾರದ ಎಲ್ಲಾ ಆಡಳಿತಾತ್ಮಕ ವಿಷಯಗಳಿಗೆ ಮಲೆಯಾಳಂನ್ನು ಉಪಯೋಗಿಸಬೇಕು. ಇನ್ನು ಕೇರಳದಿಂದ

ಕೇಂದ್ರ ಸರ್ಕಾರಿ ಸಂಸ್ಥೆಗಳು, ಇತರ ರಾಜ್ಯಗಳ ಸಂಸ್ಥೆಗಳು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಕಚೇರಿಗಳಿಗಿರುವ ಪತ್ರ ವ್ಯವಹಾರಗಳಿಗೆ ಇಂಗ್ಲಿಷ್ ಉಪಯೋಗಿಸಬಹುದು. ಹೈಕೋರ್ಟ್ ಅನುಮತಿಯೊಂದಿಗೆ ಜಿಲ್ಲಾ ನ್ಯಾಯಾಲಯ ತನಕದ ವ್ಯವಹಾರಿಕ ಭಾಷೆ ಮತ್ತು ತೀರ್ಪುಗಳನ್ನು ಹಂತಹಂತವಾಗಿ ಮಲೆಯಾಳಂ ಭಾಷೆಯಲ್ಲಿರುವುದು. 

ರಾಜ್ಯದಲ್ಲಿ ನಿರ್ಮಿಸುವ ಮತ್ತು ಮಾರಾಟ ಮಾಡುವ ಎಲ್ಲಾ ಉದ್ದಿಮೆ ಘಟಕಗಳ ನಾಮಫಲಕಗಳಲ್ಲಿ ಮಲೆಯಾಳಂ ಭಾಷೆಯನ್ನು ಒಳಪಡಿಸಬೇಕು ಅಲ್ಲದೆ ಇತರ ಹಲವು ವಿಷಯಗಳೂ ಈ ಮಸೂದೆಯಲ್ಲಿ ಒಳಗೊಂಡಿದೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries