ಚೆನ್ನೈ: 'ಚುನಾವಣೆ ವೇಳೆ ಘೋಷಿಸುವ ಉಚಿತ ಕೊಡುಗೆಗಳು ಕಲ್ಯಾಣ ಕಾರ್ಯಕ್ರಮಗಳಾಗಿವೆ. ಅವು ಸಾಮಾಜಿಕ ನ್ಯಾಯಕ್ಕಾಗಿ ಮಾಡುವ ಹೂಡಿಕೆಗಳು' ಎಂದು ಡಿಎಂಕೆಯ ನಾಯಕಿ ಕನಿಮೊಳಿ ಪ್ರತಿಪಾದಿಸಿದರು.
ಇಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 'ಮಹಿಳೆಯರಿಗೆ ಶುಲ್ಕರಹಿತ ಬಸ್ ಪ್ರಯಾಣ ಸೇವೆ ಒದಗಿಸುವುದು, ಸಾಮಾಜಿಕ ನ್ಯಾಯಾವನ್ನು ಭದ್ರಪಡಿಸುವ ಸಾಮಾಜಿಕ ಹೂಡಿಕೆಯಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಸಾಮಾಜಿಕ ನ್ಯಾಯವನ್ನು ವಿರೋಧಿಸುವವರು ಉಚಿತ ಕೊಡುಗೆಗಳು ಎಂದು ಟೀಕಿಸುತ್ತಾರೆ' ಎಂದರು.
'ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ಪ್ರೋತ್ಸಾಹ ನೀಡುತ್ತವೆ ಹಾಗೂ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಏಕೆಂದರೆ ಇದು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ' ಎಂದರು.

