ಕಾಸರಗೋಡು: ಪನತ್ತಡಿ ಕೋಳಿಚ್ಚಾಲ್ ಪ್ರಾಂದರ್‍ಕಾವು ನಿವಾಸಿ ಸಜೀವನ್(60)ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಜೀವನ್ ಅವರ ಪತ್ನಿ ಬಿ.ವಿ ಶೋಭನಾ ಫೆ. 3ರಂದು ನಿಧನರಾಗಿದ್ದು, ನಂತರ ಸಜೀವನ್ ಖಿನ್ನತೆಗೊಳಗಾಗಿದ್ದರು. ಇದೇ ಕರಣದಿಂದ ಆತ್ಮಹತ್ಯೆಗೆ ಶರಣಾಗಿರಬೇಕೆಂದು ಸಂಶಯಿಸಲಾಗಿದೆ. ರಆಜಾಪುರಂ ಠಾಣೆ ಪೊಲೀಸರು ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.

