HEALTH TIPS

ಗೃಹಪ್ರವೇಶದ ಗಂಟೆಗಳ ಮುಂಚೆ ಹೃದಯಾಘಾತದಿಂದ ಮನೆಯೊಡೆಯ ನಿಧನ

ಕುಂಬಳೆ: ನೂತನ ಮನೆಯ ಗೃಹ ಪ್ರವೇಶಕ್ಕೆ ಕೆಲವೇ ಗಂಟೆಗಳ ಮುಂಚೆ  ಮನೆಯೊಡೆಯ ಹೃದಯಾಘಾತ ದಿಂದ ಮೃತಪಟ್ಟ ಘಟನೆ ನಡೆದಿದೆ.  ಮುಗು ಉರ್ಮಿ ಜುಮಾ ಮಸೀದಿ ಸಮೀಪದ ದಿ. ಕುಂಞÂ್ಞ ಮಾಹಿನ್ ಕುಟ್ಟಿ-ಬೀಫಾತಿಮ ದಂಪತಿಯ ಪುತ್ರ ಮುಹಮ್ಮದ್ ಯಾನೆ ಮೋಣು (50) ಮೃತಪಟ್ಟ ವ್ಯಕ್ತಿ.  ಇವರು ಎರಡು ವಾರಗಳ ಹಿಂದೆ ಗಲ್ಫ್‍ನಿಂದ ಮನೆಗೆ ಆಗಮಿಸಿದ್ದರು. ಮುಗುವಿನಲ್ಲಿ ನಿರ್ಮಿಸಿದ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ನಡೆಸಲು ತೀರ್ಮಾನಿಸಲಾಗಿತ್ತು.  ಈ ಹಿನ್ನೆಲೆಯಲ್ಲಿ ಸ್ವಂತ ಮನೆಯಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಶುಕ್ರವಾರ ಮುಂಜಾನೆ 4 ಗಂಟೆಗೆ ಕಾರಿನಲ್ಲಿ ಇವರು ಬರುತ್ತಿದ್ದಾಗ ಹೃದಯಾಘಾತವುಂಟಾಗಿದೆ. ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಪತ್ನಿ ಶಂಸೀನಾ, ಮಕ್ಕಳಾದ ಮುಹಮ್ಮದ್ ರಾಸಿ, ಅಬ್ದುಲ್ ರಾಫಿಹ್, ಫಾತಿಮ, ಮುಹಮ್ಮದ್ ರಫಾನ್, ಮುಹಮ್ಮದ್ ರಹಾನ್, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries