ಮಂಜೇಶ್ವರ: ಉದ್ಯಾವರ ಮಾಡದಲ್ಲಿ ವ್ಯಾಪಾರಿಯಾಗಿರುವ ಮಂಜೇಶ್ವರ ನ್ಯೂಮಜಲ್ ನಿವಾಸಿ ಮುಹಮ್ಮದ್‍ಅಶ್ರಫ್ ಅವರ ಪುತ್ರ ಮಹಮ್ಮದ್ ತಾಹ(22)ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶುಕ್ರವಾರ ರಾತ್ರಿ ಮನೆ ಕೊಠಡಿಯೊಳಗೆ ಪ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ತಕ್ಷಣ ಕೆಳಗಿಳಿಸಿ ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಇವರ ತಂದೆ ಪೇಟೆಗೆ ಹಾಗೂ ತಾಯಿ ಮತ್ತು ಸಹೋದರಿಯರು ಅವರ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭ ಕೃತ್ಯವೆಗಿದ್ದನು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

