ಕಾಸರಗೋಡು: ಮೊಗ್ರಾಲ್ ಪುತ್ತೂರು ನಿವಾಸಿ ಹಾಗೂ ಮೊಗ್ರಾಲ್ ಪುತ್ತೂರು ವಾರ್ಡು ಮತಗಟ್ಟೆಯ ಅಧಿಕಾರಿ (ಬಿಎಲ್‍ಎ)ಮೊಗ್ರಾಲ್‍ಕಡವತ್ ಹೊಳೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚೆರ್ಕಳ ಹೈಯರ್ ಸೆಕಂಡರಿ ಶಾಲಾ ಅಧ್ಯಾಪಕ ಮಹಮ್ಮದ್ ಸವಾದ್ (32) ಮೃತಪಟ್ಟವರು.
ಸವಾದ್ ಶನಿವಾರ ಬೆಳಗ್ಗೆ ಏಳಕ್ಕೆ ಮನೆಯಿಂದ ನಾಪತ್ತೆಯಾಗಿದ್ದ ಇವರನ್ನು ಹುಡುಕಾಡುವ ಮಧ್ಯೆ ಕಡವತ್ ಹೊಳೆಯಲ್ಲಿ ಗಂಭೀರಾವಸ್ಥೆಯಲ್ಲಿ ಪತ್ತೆಹಚ್ಚಲಾಗಿದ್ದು, ತಕ್ಷಣ ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಬಿಎಲ್‍ಎ ಆಗಿ ಹೆಚ್ಚಿನ ಕರ್ತವ್ಯದ ಒತ್ತಡ ಹೊಂದಿದ್ದ ಇವರು, ಮಾನಸಿಕವಾಗಿ ಬಳಲಿ ಆತ್ಮಹತ್ಯೆ ನಡೆಸಿರಬೇಕೆಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ, ಸವಾದ್ ಬಿಎಲ್‍ಎ ಆಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದರೆಂದು ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದರು.
ಆತ್ಮಹತ್ಯೆಗೆ ಸಂಬಂಧಿಸಿದಂತೆ ಸವಾದ್ ಅವರು ಬರೆದಿಟ್ಟಿದ್ದರೆನ್ನಲಾದ ಪತ್ರವೊಂದನ್ನು ಪೆÇೀಲೀಸರು ಪತ್ತೆ ಹಚ್ಚಿದ್ದಾರೆ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ನಡೆಸುವುದಾಗಿ ಅವರು ಉಲ್ಲೇಖಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸಮಗ್ರ ತನಿಖಾ ವರದಿ ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪೆÇಲೀಸರಿಗೆ ಆದೇಶಿಸಿದ್ದಾರೆ.

