ಕಾಸರಗೋಡು: ಗಾಂಜಾ ಸಾಗಾಟ ಪ್ರಕರಣದ ಅಪರಾಧಿ, ಚೆಂಗಳ ಬಂಬ್ರಾಣಿ ನಗರ ನಿವಾಸಿ ಬಿ.ಎಸ್ ಅಬ್ದುಲ್ ಸಕೀರ್(40)ಎಂಬಾತನಿಗೆ ನ್ಯಾಯಾಲಯ 20ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 2ಲಕ್ಷ ರೂ. ದಂಡ ವೀಧಿಸಿದೆ. ದಂಡ ಪಾವತಿಸದಿದ್ದಲ್ಲಿ, ಅಪರಾಧಿ ಆರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಲಯ ಸೂಚಿಸಿದೆ.
ಕರ್ನಾಟಕ ರಸ್ತೆಸಾರಿಗೆ ಸಂಸ್ಥೆ ಬಸ್‍ನಲ್ಲಿ 2020ರ ಫೆ. 12ರಂದು ಮಂಜೇಶ್ವರ ಅಬಕಾರಿ ಚೆಕ್‍ಪೋಸ್ಟ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, 22ಕಿಲೋ ಗಾಂಜಾ ವಶಪಡಿಸಿಕೊಂಡಿದ್ದು, ಆರೋಪಿ ಪರಾರಿಯಾಗಿದ್ದನು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶ ಪ್ರಕಾರ ವಿದ್ಯಾನಗರ ಠಾಣೆ ಪೊಲೀಸರು ಎರ್ನಾಕುಳಂನಲ್ಲಿ ಕಾರ್ಯಾಚರಣೆ ನಡೆಸಿ ಅರೋಪಿಯನ್ನು ಬಂಧಿಸಿದ್ದರು.

