ಟಾಪುಕಾರಾ: ಭಾರತದ ಪ್ರೀಮಿಯಂ ಕಾರುಗಳ ಮುಂಚೂಣಿಯ ಉತ್ಪಾದಕ ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್.ಸಿ.ಐ.ಎಲ್.) ಇಂದು ತನ್ನ ಬ್ಯಾಟರಿ ಚಾಲಿತ ವಾಹನ (ಬಿ.ಇ.ವಿ.) ಎಸ್.ಯು.ವಿ.ಯ ಅಖಿಲ ಭಾರತ ಪರೀಕ್ಷಾ ಚಾಲನೆ ಪ್ರಾರಂಭಿಸಿದ್ದು ಇದು ಭಾರತದಲ್ಲಿ ಸಾರ್ವಜನಿಕ ರಸ್ತೆಯ ಪರಿಶೀಲನೆಯ ಮೊದಲ ಅಧಿಕೃತ ಪ್ರಾರಂಭವಾಗಿದೆ.
ಇದು ಹೊಂಡಾದ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರಯಾಣದಲ್ಲಿ ಹಾಗೂ ಭಾರತೀಯ ಗ್ರಾಹಕರಿಗೆ ಹೊಚ್ಚಹೊಸ ಎಲೆಕ್ಟ್ರಿಕ್ ಎಸ್.ಯು.ವಿ.ಯ ಭವಿಷ್ಯದ ಬಿಡುಗಡೆಯತ್ತ ಪ್ರಮುಖ ಹೆಜ್ಜೆಯಾಗಿದೆ.
ಈ ಮಾದರಿಯ ಪ್ರೊಟೊಟೈಪ್ ಜಾಗತಿಕವಾಗಿ Honda 0 α, ಎಂದು ಖ್ಯಾತಿ ಪಡೆದಿದ್ದು 2025ರಲ್ಲಿ ಜಪಾನ್ ಮೊಬಿಲಿಟಿ ಶೋನಲ್ಲಿ ಅನಾವರಣಗೊಂಡಿತ್ತು.
ಈ ಪರೀಕ್ಷಾ ಕಾರ್ಯಕ್ರಮವು ವಾಹನವನ್ನು ವಿಸ್ತಾರ ಶ್ರೇಣಿಯ ಭಾರತದ ಚಾಲನೆಯ ಪರಿಸ್ಥಿತಿ ಗಳಲ್ಲಿ ಮೌಲ್ಯಮಾಪನ ಮಾಡಲಿದ್ದು ಅದರಲ್ಲಿ ಹೆದ್ದಾರಿಗಳು, ನಗರದ ರಸ್ತೆಗಳು ಮತ್ತು ಸವಾಲಿನ ಪ್ರದೇಶಗಳು ಒಳಗೊಂಡಿರುತ್ತವೆ. ದೀರ್ಘಬಾಳಿಕೆ, ನಿರ್ವಹಣೆ, ರೈಡ್ ಕಂಫರ್ಟ್, ದಕ್ಷತೆ ಮತ್ತು ಒಟ್ಟಾರೆ ವಿಶ್ವಾಸಾರ್ಹತೆಯು ಪ್ರಮುಖ ಆದ್ಯತೆಯ ವಲಯಗಳಾಗಿವೆ. ಈ ವಾಹನವು ಅತ್ಯಂತ ತೀವ್ರ ಬಿಸಿಲು ಮತ್ತು ಮಳೆಗಾಲದ ಪರಿಸ್ಥಿತಿಗಳಲ್ಲೂ ಪರೀಕ್ಷೆಗೆ ಒಳಪಡಲಿದ್ದು ಅದರೊಂದಿಗೆ ಪ್ರತಿನಿತ್ಯದ ಬಳಸಬಲ್ಲತೆಗೆ ಪರೀಕ್ಷೆಗೆ ಒಳಪಡುತ್ತದೆ.
ಈ ಸಂದರ್ಭ ಕುರಿತು ಹೊಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ತಕಷಿ ನಕಜಿಮಾ, "ಅಖಿಲ ಭಾರತ ಸಾರ್ವಜನಿಕ ರಸ್ತೆ ಪರಿಶೀಲನಾ ಪರೀಕ್ಷೆಯ ಪ್ರಾರಂಭವು ನಮ್ಮ ವಿದ್ಯುದೀಕರಣದ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಭಾರತವು ವಿಶಿಷ್ಟ ಚಾಲನೆಯ ಮತ್ತು ವಾತಾವರಣೆ ಪರಿಸ್ಥಿತಿಗಳನ್ನು ಹೊಂದಿದೆ ಮತ್ತು ನಮಗೆ ನಮ್ಮ ವಿದ್ಯುತ್ ವಾಹನವನ್ನು ನೈಜ ಜಗತ್ತಿನ ಪರಿಸರ ಗಳನ್ನು ಇಡಿಯಾಗಿ ಪರೀಕ್ಷಿಸುವುದು ಬಹಳ ಮುಖ್ಯವಾಗಿದೆ. ಈ ಕಾರ್ಯಕ್ರಮವು ಹೊಂಡಾದ ಜಾಗತಿಕ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಸ್ಥಳೀಯ ಗ್ರಾಹಕರ ಅಗತ್ಯಗಳಿಗೆ ಸದೃಢವಾದ ಆದ್ಯತೆಯೊಂದಿಗೆ ಸಂಯೋಜಿಸಿದ್ದು ನಾವು ವಿಶ್ವಾಸಾರ್ಹತೆ, ಸೌಖ್ಯ ಮತ್ತು ಸುಲಭ ಬಳಕೆಯನ್ನು ಒದಗಿಸುವ ಎಲೆಕ್ಟ್ರಿಕ್ ಎಸ್.ಯು.ವಿ. ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದೇವೆ" ಎಂದರು.
ಈ ಮುಂದೆ ಬರಲಿರುವ ಎಲೆಕ್ಟ್ರಿಕ್ ಎಸ್.ಯು.ವಿ.ಯನ್ನು ನಗರ ಮತ್ತು ಜೀವನಶೈಲಿ ಕೇಂದ್ರಿತ ಚಾಲನೆಗೆ ಅಭಿವೃದ್ಧಿಪಡಿಸಲಾಗಿದ್ದು ವಿಸ್ತಾರ ಶ್ರೇಣಿಯ ದೈನಂದಿನ ಬಳಕೆಯ ಪ್ರಕರಣಗಳಿಗೆ ಬೆಂಬಲಿಸುತ್ತದೆ. ಈ ಮಾದರಿಯನ್ನು 2026-27ರ ಹಣಕಾಸು ವರ್ಷದಲ್ಲಿ ಜಾಗತಿಕ ಬಿಡುಗಡೆಗೆ ಯೋಜಿಸಲಾಗಿದ್ದು ಭಾರತ ಮತ್ತು ಜಪಾನ್ ಪ್ರಮುಖ ಮಾರುಕಟ್ಟೆಗಳಾಗಿವೆ. ಈ ವಾಹನವನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.

