HEALTH TIPS

ಪಿಎನ್‌ಜಿ ಹೊಂದಿರುವವರಿಗೆ ಎಲ್‌ಪಿಜಿ ಸಂಪರ್ಕ ನಿರ್ಬಂಧಿಸಿದ ಕೇಂದ್ರ ಸರ್ಕಾರ

 ವದೆಹಲಿ: ಜಾಗತಿಕ ಇಂಧನ ಪೂರೈಕೆ ಅಡಚಣೆಗಳ ನಡುವೆ ಅಡುಗೆ ಅನಿಲ ಸರಬರಾಜಿನ ಮೇಲಿನ ಒತ್ತಡ ಕಡಿಮೆ ಮಾಡಲು ಕೊಳವೆ ಮೂಲಕ ಸರಬರಾಜಾಗುವ ನೈಸರ್ಗಿಕ ಅನಿಲ(ಪಿಎನ್‌ಜಿ) ಸಂಪರ್ಕ ಹೊಂದಿರುವವವರು, ಸಬ್ಸಿಡಿ ದರದಲ್ಲಿ ನೀಡಲಾಗುವ ಗೃಹಬಳಕೆ ಎಲ್‌ಪಿಜಿ ಸಂಪರ್ಕಗಳನ್ನು ಉಳಿಸಿಕೊಳ್ಳುವುದನ್ನು ಅಥವಾ ಪಡೆಯುವುದನ್ನು ಸರ್ಕಾರ ನಿರ್ಬಂಧಿಸಿದೆ. 


ಅಗತ್ಯ ಸರಕುಗಳ ಕಾಯ್ದೆಯಡಿಯಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ (ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ಆದೇಶ 2000ಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತಿದ್ದುಪಡಿ ತಂದಿದ್ದು, ಪಿಎನ್‌ಜಿ ಸಂಪರ್ಕಗಳನ್ನು ಹೊಂದಿರುವ ಗ್ರಾಹಕರು ತಮ್ಮ ಗೃಹಬಳಕೆಯ ಎಲ್‌ಪಿಜಿ ಸಿಲಿಡಂರ್‌ಗಳನ್ನು ಹಿಂದಿರುಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮಾರ್ಚ್ 14 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪಿಎನ್‌ಜಿ ಸಂಪರ್ಕ ಹೊಂದಿರುವವರಿಗೆ ಎಲ್‌ಪಿಜಿ ಸಂಪರ್ಕ ಅಥವಾ ರೀಫಿಲ್ಲಿಂಗ್ ಸಿಲಿಂಡರ್‌ಗಳನ್ನು ವಿತರಿಸಿದಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತು ವಿತರಕರಿಗೆ ನಿರ್ಬಂಧವನ್ನೂ ತಿದ್ದುಪಡಿ ಆದೇಶದಲ್ಲಿ ಹೇರಲಾಗಿದೆ.

'ಕೊಳವೆ ಮೂಲಕ ನೈಸರ್ಗಿಕ ಅನಿಲ(ಪಿಎನ್‌ಜಿ) ಸಂಪರ್ಕ ಮತ್ತು ಗೃಹಬಳಕೆಯ ಎಲ್‌ಪಿಜಿ ಸಂಪರ್ಕ ಹೊಂದಿರುವ ಯಾವುದೇ ವ್ಯಕ್ತಿ, ಎಲ್‌ಪಿಜಿ ಸಿಲಿಂಡರ್ ಅನ್ನು ಕೂಡಲೇ ಹಿಂದಿರುಗಿಸಬೇಕು ಅಥವಾ ಯಾವುದೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಿಂದ ಅಥವಾ ವಿತರಕರ ಮೂಲಕ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ರೀಫಿಲ್ಲಿಂಗ್ ಪಡೆಯಬಾರದು. ಅಂತಹ ವ್ಯಕ್ತಿಗಳು ತಮ್ಮ ಗೃಹಬಳಕೆಯ ಎಲ್‌ಪಿಜಿ ಸಂಪರ್ಕವನ್ನು ತಕ್ಷಣವೇ ತ್ಯಜಿಸಬೇಕಾಗುತ್ತದೆ'ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಿಎನ್‌ಜಿ ಸಂಪರ್ಕ ಹೊಂದಿಲ್ಲದ ಎಲ್‌ಪಿಜಿ ಗ್ರಾಹಕರಿಗೆ ಆದ್ಯತೆ ನೀಡಲು ಈ ಆದೇಶ ಮಾಡಲಾಗಿದೆ.

ಭಾರತವು ಶೇ 88ರಷ್ಟು ಕಚ್ಚಾ ತೈಲ, ಶೇ 50ರಷ್ಟು ನೈಸರ್ಗಿಕ ಅನಿಲ್ ಮತ್ತು ಶೇ 60ರಷ್ಟು ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳುತ್ತದೆ.. ಅಮೆರಿಕ, ಇಸ್ರೇಲ್ ಮತ್ತು ಇರಾನ್ ಯುದ್ಧ ಆರಂಭಕ್ಕೂ ಮುನ್ನ ಭಾರತದ ಬಳಕೆಯ ಅರ್ಧದಷ್ಟು ಕಚ್ಚಾತೈಲ, ಶೇ 30ರಷ್ಟು ನೈಸರ್ಗಿಕ ಅನಿಲ ಮತ್ತು ಶೇ 85-90ರಷ್ಟು ಎಲ್‌ಪಿಜಿಯನ್ನು ಪಶ್ಚಿಮ ಏಷ್ಯಾ ದೇಶಗಳಾದ ಸೌದಿ ಅರೇಬಿಯಾ ಮತ್ತು ಯುಎಇಯಿಂದ ಬರುತ್ತಿತ್ತು. ಯುದ್ಧದಿಂದಾಗಿ ಗಲ್ಫ್ ಇಂಧನ ಸಾಗಣೆಯ ಪ್ರಮುಖ ಸಮುದ್ರ ಮಾರ್ಗ ಹೊರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಸರಬರಾಜಿಗೆ ಅಡಚಣೆಯಾಗಿದೆ. ಭಾರತದ ತೈಲ ಸರಬಾರಿಗೂ ಇದರಿಂದ ತೊಂದರೆಯಾಗಿದ್ದು, ರಷ್ಯಾದ ಮೊರೆಹೋಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries