HEALTH TIPS

ಇರಾನ್‌ನ 'ಲವಣ್' ನಿಲುಗಡೆಗೆ ಭಾರತ ಅನುಮೋದನೆ: ಜೈಶಂಕರ್‌

ನವದೆಹಲಿ: ಕೊಚ್ಚಿಯಲ್ಲಿ ಇರಾನಿನ ನೌಕೆ 'ಐಆರ್‌ಐಎಸ್ ಲವಣ್‌' ಅನ್ನು‌ ತುರ್ತು ನಿಲುಗಡೆಗೆ ಭಾರತದ ಅನುಮೋದಿಸಿದೆ ವಿದೇಶಾಂಗ ಸಚಿವ ಜೈಶಂಕರ್ ದೃಢಪಡಿಸಿದರು.

'ನಮ್ಮ ಗಡಿಗಳಿಗೆ ಹತ್ತಿರದ ಪ್ರದೇಶ ದಲ್ಲಿದ್ದ ನಮ್ಮ ದೇಶದ ಹಡಗುಗಳಲ್ಲಿ ಒಂದು ಹಡಗು ನಮ್ಮ ಬಂದರಿಗೆ ಬರಲು ಬಯಸಿದೆ ಎಂದು ಇರಾನ್ ಕಡೆಯಿಂದ ನಮಗೆ ಸಂದೇಶ ಬಂದಿತ್ತು. ಹಡಗಿನಲ್ಲಿದ್ದವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದೂ ಸಂದೇಶದಲ್ಲಿ ತಿಳಿಸಿದ್ದರು.

'ಇರಾನ್‌ ನೌಕೆಗೆ ಮಾರ್ಚ್ 1 ರಂದು ನಮ್ಮ ಗಡಿ ಪ್ರದೇಶದೊಳಗೆ ಬರಲು‌ ತಿಳಿಸಿದೆವು . ಅವರು ನಮ್ಮ ಗಡಿ ಪ್ರದೇಶ ತಲುಪಲು ಕೆಲವು ದಿನಗಳನ್ನು ತೆಗೆದುಕೊಂಡರು. ನಂತರ ಕೊಚ್ಚಿಯ ಬಂದರು ತಲುಪಿದರು' ಎಂದರು.

ಅಮೆರಿಕವು ಇರಾನಿನ ಯುದ್ಧನೌಕೆ ಐಆರ್‌ಐಎಸ್ ದೇನಾ ಮೇಲೆ ದಾಳಿ ಮಾಡಿ ಮುಳುಗಿಸುವ ಕೆಲವು ದಿನಗಳ ಮೊದಲು, ಆ ಹಡಗನ್ನು ಲಂಗರು ಹಾಕಲು ಮಾಡಿದ್ದ ವಿನಂತಿಯನ್ನು ಭಾರತೀಯ ನೌಕಾಪಡೆಯು ಅನುಮೋದಿಸಿತ್ತು.

ಐಆರ್‌ಐಎಸ್ ಲವಣ್‌ ಹಡಗು ಮಾರ್ಚ್ 4ರಂದು ಕೊಚ್ಚಿಯನ್ನು ತಲುಪಿದೆ. ಅದರಲ್ಲಿದ್ದ 183 ಸಿಬ್ಬಂದಿಯನ್ನು ಪ್ರಸ್ತುತ ಮಾನವೀಯ ಆಧಾರದ ಮೇಲೆ ಭಾರತೀಯ ನೌಕಾ ಸೌಲಭ್ಯಗಳನ್ನು ನೀಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries