HEALTH TIPS

ಯಾವೆಲ್ಲಾ ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಅಮೆರಿಕದ ವಾಯುನೆಲೆಗಳಿವೆ?

ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಿವೆ. 2024ರ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ ವರದಿಯ ಪ್ರಕಾರ ಅಮೆರಿಕದ ರಕ್ಷಣಾ ಇಲಾಖೆ ವಿಶ್ವದಾದ್ಯಂತ 51 ದೇಶಗಳಲ್ಲಿ 128 ವಿದೇಶಿ ವಾಯು ನೆಲೆಗಳನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದೆ.

ಅಮೆರಿಕದ ವಾಯುನೆಲೆಗಳು ಪ್ರಮುಖ ಇಸ್ಲಾಮಿಕ್ ದೇಶಗಳಲ್ಲಿಯೂ ಇವೆ. ಇಸ್ಲಾಮಿಕ್ ದೇಶಗಳಲ್ಲಿರುವ ಪ್ರಮುಖ ವಾಯುನೆಲೆಗಳ ಪಟ್ಟಿ ಇಲ್ಲಿದೆ.

‌ಕತಾರ್

ಕತಾರ್‌ನ ರಾಜಧಾನಿ ದೋಹಾದ ಹೊರವಲಯದಲ್ಲಿ ಅಮೆರಿಕದ ನೌಕಾ ನೆಲೆ ಇದೆ. 24 ಹೆಕ್ಟೇರ್ ವಿಸ್ತೀರ್ಣದ ಈ ನೆಲೆಯಲ್ಲಿ ಸುಮಾರು 10,000 ಸೈನಿಕರಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸಿಆರ್‌ಎಸ್‌ ವರದಿಯ ಪ್ರಕಾರ ಕತಾರ್‌ ಈ ವಾಯುನೆಲೆಯನ್ನು ಅಭಿವೃದ್ಧಿಪಡಿಸಲು 8 ಶತಕೋಟಿ ಅಮೆರಿಕನ್‌ ಡಾಲರ್ ಖರ್ಚು ಮಾಡಿದೆ. ಇತ್ತೀಚೆಗೆ ಅಮೆರಿಕ ಈ ವಾಯುನೆಲೆಯನ್ನು ಇನ್ನೂ ಹತ್ತು ವರ್ಷಗಳ ಕಾಲ ಬಳಕೆ ಮಾಡಿಕೊಳ್ಳುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ವಾಯುನೆಲೆಯಲ್ಲಿ ಕಣ್ಗಾವಲು ವಿಮಾನಗಳು, ಟ್ಯಾಂಕರ್, ಏರ್‌ಲಿಫ್ಟ್ ವಿಮಾನಗಳು, ಗ್ಲೋಬ್‌ಮಾಸ್ಟರ್‌, CH-130H ಹರ್ಕ್ಯುಲಸ್, ಪೇಟ್ರಿಯಾಟ್ ಕ್ಷಿಪಣಿಯ ರಕ್ಷಣಾ ವ್ಯವಸ್ಥೆ ಮತ್ತು ರಾಡಾರ್‌ಗಳಿವೆ. ಇಲ್ಲಿ ಸುಮಾರು 8,000 ರಿಂದ 10,000 ಅಮೆರಿಕನ್ ಸೈನಿಕರು ಇದ್ದಾರೆ ಎಂದು ಸಿಆರ್‌ಎಸ್ ವರದಿ ಅಂದಾಜಿಸಿದೆ.

ಬಹ್ರೇನ್

ಸಿಆರ್‌ಎಸ್‌ ವರದಿಯ ಪ್ರಕಾರ, ಬಹ್ರೇನ್‌ನಲ್ಲಿ ಅಮೆರಿಕಕ್ಕೆ ಸೇರಿದ ಬಂದರು ಇದೆ. ಇಲ್ಲಿನ ನೌಕಾಪಡೆಯಲ್ಲಿ 4 ಹಡಗುಗಳು, ಮಿಲಿಟರಿ ಸೀಲಿಫ್ಟ್ ಕಮಾಂಡ್, ಎರಡು ಲಾಜಿಸ್ಟಿಕಲ್ ಹಡಗುಗಳು ಸೇರಿವೆ. ಅಲ್ಲದೇ ಕಡಲ ಗಸ್ತು ಮತ್ತು ವಿಕ್ಷಣ ವಿಮಾನ, ಪೇಟ್ರಿಯಾಟ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿವೆ. ಇಲ್ಲಿ 9,000 ಸೈನಿಕರಿದ್ದಾರೆ.

ಕುವೈತ್

ಕುವೈತ್‌ನಲ್ಲಿ ಅಮೆರಿಕ ಹಲವು ಮಿಲಿಟರಿ ನೆಲೆಗಳನ್ನು ಹೊಂದಿದೆ. ಅಲಿ ಅಲ್-ಸೇಲೆಂ ವಾಯುನೆಲೆಯಲ್ಲಿ ಅಮೆರಿಕದ 386ನೇ ವಾಯು ಪಡೆಯ ವಿಭಾಗವಿದೆ. ಇಲ್ಲಿಂದ ಸೈನಿಕರಿಗೆ ಅಗತ್ಯ ವಸ್ತುಗಳ ತಲುಪಿಸಲು ಈ ನೆಲೆ ಪ್ರಾಥಮಿಕ ಏರ್‌ಲಿಫ್ಟ್ ಹಬ್ ಮತ್ತು ಗೇಟ್‌ವೇ ಆಗಿ ಕೆಲಸ ಮಾಡುತ್ತದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)

ಅಬುಧಾಬಿಯ ದಕ್ಷಿಣದಲ್ಲಿರುವ ಅಲ್ ಧಾಫ್ರಾದಲ್ಲಿ ಅಮೆರಿಕದ ವಾಯುನೆಲೆಯಿದೆ. ಇಲ್ಲಿ ಅಮೆರಿಕದ 380ನೇ ವಾಯುಪಡೆಯ ವಿಭಾಗವಿದೆ. ಇಲ್ಲಿ 10 ಯುದ್ದ ವಿಮಾನಗಳುಳ್ಳ ಸ್ಕ್ವಾಡ್ರನ್‌ ಮತ್ತು MQ-9 ಡ್ರೋನ್‌ಗಳಿವೆ. ಯುಎಇ ವಾಯುಪಡೆಯ ಸಹಭಾಗಿತ್ವದಲ್ಲಿ ಈ ವಾಯುನೆಲೆ ನಿರ್ಮಾಣವಾಗಿದೆ. ಇಲ್ಲಿ 2000 ಮಂದಿ ಸೈನಿಕರಿದ್ದಾರೆ.

ಇರಾಕ್

ಅಲ್-ಅಸಾದ್ ಮತ್ತು ಏರ್ಬಿಲ್ ವಾಯುನೆಲೆಗಳು ಸೇರಿದಂತೆ ಹಲವು ಕಡೆ ಅಮೆರಿಕದ ನೆಲೆಗಳಿವೆ. ಎಎಫ್‌ಪಿ ವರದಿ ಪ್ರಕಾರ, ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡುವ ಅಂತರರಾಷ್ಟ್ರೀಯ ಒಕ್ಕೂಟದ ಭಾಗವಾಗಿ 2,500 ಮಂದಿ ಅಮೆರಿಕದ ಸೈನಿಕರು ಬಾಗ್ದಾದ್, ಉತ್ತರ ಕುರ್ದಿಷ್ ಮತ್ತು ಪಶ್ಚಿಮ ಮರುಭೂಮಿಯಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದೆ.

ಸೌದಿ ಅರೇಬಿಯಾ

ವರದಿಯ ಪ್ರಕಾರ, ಇಲ್ಲಿನ ಪ್ರಿನ್ಸ್ ಸುಲ್ತಾನ್ ವಾಯುನೆಲೆಯಲ್ಲಿ ಅಮೆರಿಕದ 378ನೇ ಸೈನಿಕ ಪಡೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 2,200 ಸೈನಿಕರಿದ್ದು, ಯುದ್ಧ ವಿಮಾನಗಳಿಗೆ ಇಂಧನ ತುಂಬುವ ಸಾಮರ್ಥ್ಯವನ್ನು ಈ ವಾಯುನೆಲೆ ಹೊಂದಿದೆ.

ಈಜಿಪ್ಟ್

ಇಲ್ಲಿನ ಕೈರೋ ವೆಸ್ಟ್ ವಾಯುನೆಲೆಯಲ್ಲಿ ಅಮೆರಿಕ ಮತ್ತು ಈಜಿಪ್ಟ್ ಜಂಟಿಯಾಗಿ ನಿರ್ಮಿಸಿರುವ ಮಿಲಿಟರಿ ತರಬೇತಿ ಕೇಂದ್ರಗಳು ಹಾಗೂ ಸೈನಿಕ ಶಿಬಿರಗಳಿವೆ.

ಜೋರ್ಡಾನ್

ಜೋರ್ಡಾನ್ ರಾಜಧಾನಿ ಅಮ್ಮನ್‌ನಿಂದ ಈಶಾನ್ಯಕ್ಕೆ 100 ಕಿ.ಮೀ ದೂರದಲ್ಲಿರುವ ಮುವಾಫಕ್ ಅಲ್ ಸಾಲ್ಟಿ ವಾಯುನೆಲೆಯಲ್ಲಿ ಅಮೆರಿಕದ 332 ನೇ ವಾಯು ಪಡೆಯ ವಿಭಾಗವಿದೆ. ಇಲ್ಲಿ F-35 ಯುದ್ಧ ವಿಮಾನಗಳೂ ಹಾಗೂ 3,188 ಮಿಲಿಟರಿ ಸಿಬ್ಬಂದಿಗಳಿದ್ದಾರೆ.

ಇಸ್ರೇಲ್: ಅಮೆರಿಕ ಇಸ್ರೇಲ್‌ನಲ್ಲಿ ಮಿಲಿಟರಿ ನೆಲೆಯನ್ನು ಹೊಂದಿಲ್ಲ. ಆದರೆ ಎರಡೂ ದೇಶಗಳು ಜಂಟಿ ಕಾರ್ಯಚರಣೆ ನಡೆಸುತ್ತವೆ.

ಯೆಮನ್ : ಇಲ್ಲಿ ಸಣ್ಣ ಸಂಖ್ಯೆಯ ಅಮೆರಿಕದ ಮಿಲಿಟರಿ ಪಡೆಗಳು ಇವೆ ಎಂದು ವರದಿಯಾಗಿದೆ.

‌(ಹಲವು ಸುದ್ದಿ ಸಂಸ್ಥೆಗಳ ವರದಿ ಕ್ರೋಢಿಕರಿಸಿ ಬರೆದ ಮಾಹಿತಿ)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries