ಕೇಂದ್ರ ಸರಕಾರವು ಮಾ.14ರಂದು ವಾಂಗ್ಚುಕ್ ಅವರ ಬಂಧನವನ್ನು ರದ್ದುಗೊಳಿಸಿರುವುದರಿಂದ ಅರ್ಜಿಯು ನಿಷ್ಪ್ರಯೋಜಕವಾಗಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ಪಿ.ಬಿ.ವರಾಳೆ ಅವರ ಪೀಠವು,ಈ ವಿಷಯದಲ್ಲಿ ನಿರ್ಧರಿಸಲು ಏನೂ ಉಳಿದಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಿಸಿತು.
ಆರಂಭದಲ್ಲಿ ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ವಿಚಾರಣೆಯನ್ನು ರಜೆಯ ಬಳಿಕ ನಿಗದಿಗೊಳಿಸುಂತೆ ಕೋರಿದಾಗ ಪೀಠವು, ಇಲ್ಲ, ನಿರ್ಧರಿಸಲು ಏನು ಉಳಿದಿದೆ ಎಂದು ಪ್ರಶ್ನಿಸಿತು ಮತ್ತು ಅರ್ಜಿಯನ್ನು ನಿಷ್ಪ್ರಯೋಜಕ ಎಂದು ಪರಿಗಣಿಸಿ ವಿಲೇವಾರಿ ಮಾಡಿತು.
ವಾಂಗ್ಚುಕ್ ಈಗಾಗಲೇ ಎನ್‌ಎಸ್‌ಎ ಅಡಿ ಮುನ್ನೆಚ್ಚರಿಕೆ ಬಂಧನದ ಗರಿಷ್ಠ ಅವಧಿಯ ಸುಮಾರು ಅರ್ಧದಷ್ಟನ್ನು ಅನುಭವಿಸಿದ್ದಾರೆ ಎನ್ನುವುದನ್ನು ಗಮನಿಸಿ ಕೇಂದ್ರವು ಅವರ ಬಂಧನವನ್ನು ರದ್ದುಗೊಳಿಸಿದೆ.

