ಕಾಸರಗೋಡು: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹದಿನಾಲ್ಕರ ಹರೆಯದ ಬಾಲಕರಿಬ್ಬರಿಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ, ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.
ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿನಾಲ್ಕರ ಹರೆಯದ ಬಾಲಕಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ 'ಪೋಕ್ಸೋ'ಅನ್ವಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಮೊಗ್ರಾಲ್ ಮಶೂರ್ ಕ್ವಾಟ್ರಸ್‍ನಲ್ಲಿ ವಾಸಿಸುತ್ತಿರುವ ಮಹಮ್ಮದ್ ನಾಸರ್ ಹಾಗೂ ಮೊಗ್ರಾಲ್ ವಣ್ಣತ್ತಾನ್ ಕಡವು ನಿವಾಸಿ ಶಂಸುದ್ದೀನ್ ಅಲಿಯಾಸ್ ಪೂಚಕಣ್ಣ ಶಂಸುದ್ದೀನ್ ಬಂಧಿತರು.
ಬಾಲಕ ನೀಡಿದ ದೂರಿನನ್ವಯ ಈ ಬಂಧನ ನಡೆದಿದೆ. 2024 ರಲ್ಲಿ ಶಂಸುದ್ದೀನ್ ಹಾಗೂ 2025ರಲ್ಲಿ ಮಹಮ್ಮದ್ ನಾಸರ್ ತನಗೆ ಹಲವು ಬಾರಿ ಸಲಿಂಗ ಕಿರುಕುಳ ನೀಡಿರುವುದಾಗಿ ಬಾಲಕ ದೂರಿನಲ್ಲಿ ತಿಳಿಸಿದ್ದಾನೆ. ವಿದ್ಯಾನಗರ ಠಾಣೆ ವ್ಯಾಪ್ತಿಯ ಹದಿನಾಲ್ಕರ ಹರೆಯದ ಬಾಲಕ ನೀಡಿದ ದೂರಿನನ್ವಯ ಕ್ವಾಟ್ರಸ್‍ಗೆ ಕರೆದೊಯ್ದು ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬದ್ರುದ್ದೀನ್ ಯಾನೆ ಕಾಲಿಯಾ ಬದ್ರುದ್ದೀನ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬದಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ಹದಿನಾಲ್ಕರ ಹರೆಯದ ಬಾಲಕಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮೋಹನ್ ಎಂಬಾತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ. ಬಸ್ ಪ್ರಯಾಣದ ಮಧ್ಯೆ ಕಿರುಕುಳ ನೀಡಿರುವುದಾಗಿ ಬಾಲಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

