ಮಂಜೇಶ್ವರ:ಪ್ರಸ್ತುತ ಉಪ್ಪಳದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜೇಶ್ವರ ತಾಲೂಕಿಗೆ ತನ್ನದೇ ಆದ ಶಾಶ್ವತ ಪ್ರಧಾನ ಕಚೇರಿ ಕಟ್ಟಡವನ್ನು ಮಂಜೂರು ಮಾಡಬೇಕೆಂದು ತಾಲ್ಲೂಕು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
ಮಂಜೇಶ್ವರ ತಾಲ್ಲೂಕು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ಸಮಿತಿಯು ಈ ಬೇಡಿಕೆಯನ್ನು ಮುಂದಿಟ್ಟಿತು. 2014 ರಲ್ಲಿ ರಚನೆಯಾದ ಮಂಜೇಶ್ವರ ತಾಲ್ಲೂಕು ಕಚೇರಿ ತನ್ನದೇ ಆದ ಕಟ್ಟಡವಿಲ್ಲದೆ ತಾತ್ಕಾಲಿಕ ಸೌಲಭ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸಾರ್ವಜನಿಕ ಸೇವೆಗಳಿಗೆ ತೊಂದರೆಗಳನ್ನುಂಟುಮಾಡುತ್ತಿದೆ ಎಂದು ಸಭೆ ಗಮನಿಸಿತು. ಮಂಜೇಶ್ವರಂ ತಾಲ್ಲೂಕಿನ ಜನರ ಆಡಳಿತ ಮತ್ತು ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು ಶಾಶ್ವತ ಪ್ರಧಾನ ಕಚೇರಿ ಕಟ್ಟಡ ಅತ್ಯಗತ್ಯ ಎಂದು ಅಭಿವೃದ್ಧಿ ಸಮಿತಿ ಬೊಟ್ಟುಮಾಡಿತು.
ಜಿಲ್ಲಾ ಪಂಚಾಯತಿ ಸದಸ್ಯ ಹರ್ಷಾದ್ ವರ್ಕಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಮಂಜೇಶ್ವರ ತಹಶೀಲ್ದಾರ್ ಪಿ. ಸಜಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಭೆಯಲ್ಲಿ ಸಾರ್ವಜನಿಕ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

.jpg)
.jpg)
