HEALTH TIPS

'ಬೇರೆಯೇ ಕಾರಣಕ್ಕಾಗಿ ಮೋದಿ ಹೆದರಿಕೊಂಡಿದ್ದಾರೆ' : ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ದೇಶಾದ್ಯಂತ ಎಲ್‌ಪಿಜಿ ಪೂರೈಕೆ ಕೊರತೆಯುಂಟಾಗಿರುವ ಬಗ್ಗೆ ಉದ್ಭವಿಸಿರುವ ಕಳವಳಗಳ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ''ಎಲ್‌ಪಿಜಿ ಪೂರೈಕೆ ಬಗ್ಗೆ ಜನರು ಗಾಬರಿಗೊಳ್ಳಬಾರದೆಂದು ಪ್ರಧಾನಿ ಹೇಳುತ್ತಿದ್ದಾರೆ.

ಆದರೆ ವಾಸ್ತವಿಕವಾಗಿ ಅವರು ಸಂಪೂರ್ಣವಾಗಿ ಬೇರೆಯೇ ಆದ ಕಾರಣಕ್ಕಾಗಿ ಭಯಭೀತರಾಗಿದ್ದಾರೆ'' ಎಂದು ಟೀಕಿಸಿದ್ದಾರೆ.

ಎಪ್‌ಸ್ಟೈನ್ ಫೈಲ್ಸ್ ಹಗರಣ ಹಾಗೂ ಅಮೆರಿಕದಲ್ಲಿ ಆದಾನಿ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯವರು ಭಯಗೊಂಡಿದ್ದಾರೆಂದು ಗಾಂಧಿ ಆಪಾದಿಸಿದ್ದಾರೆ.

ದೇಶದಲ್ಲಿ ಎಲ್‌ಪಿಜಿ ಕೊರತೆನ್ನು ಖಂಡಿಸಿ ಗುರುವಾರ ತಾನು ಹಾಗೂ ಪ್ರಿಯಾಂಕಾಗಾಂಧಿ ವಾದ್ರಾ ಸೇರಿದಂತೆ ಹಲವಾರು ಪ್ರತಿಪಕ್ಷ ಸಂಸದರು ಸಂಸತ್‌ಭವನ ಸಂಕೀರ್ಣದ ಮಕರದ್ವಾರದ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ರಾಹುಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭ ಈ ಹೇಳಿಕೆ ನೀಡಿದ್ದಾರೆ.

ಸಂಸತ್‌ಭವನ ಸಂಕೀರ್ಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಿಯಾಂಕಾಗಾಂಧಿ ಸೇರಿದಂತೆ ಹಲವಾರು ಮಹಿಳಾ ಸಂಸದರು ಪಾಲ್ಗೊಂಡು ಇಟ್ಟಿಗೆ ಒಲೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಡಿಎಂಕೆ, ಟಿಎಂಸಿ ಹಾಗೂ ಎಸ್‌ಪಿ ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಎಲ್‌ಪಿಜಿ ಕೊರತೆಯ ಬಗ್ಗೆ ಜನರು ಗಾಬರಿಗೊಳ್ಳಬೇಕಾಗಿಲ್ಲವೆಂದು ಪ್ರಧಾನಿ ಹೇಳುತ್ತಾರೆ. ಆದರೆ ಅವರು ಎಪ್‌ಸ್ಟೈನ್ ಕಾರಣಕ್ಕಾಗಿ, ಅಮೆರಿಕದಲ್ಲಿ ಆದಾನಿ ಪ್ರಕರಣದ ಕಾರಣಕ್ಕಾಗಿ ಭಯಗೊಂಡಿದ್ದಾರೆ. ಹೀಗಾಗಿ ಅವರಿಗೆ ಸದನಕ್ಕೆ ಬರಲು ಸಾಧ್ಯವಾಗುತ್ತಿಲ್ಲವೆಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries