HEALTH TIPS

ಕದನ ವಿರಾಮ ಮಾಡಿಕೊಳ್ಳುವುದಿಲ್ಲ, ಆತ್ಮರಕ್ಷಣೆಗೆ ಬದ್ಧ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ

 ಟೆಹ್ರಾನ್: ಅಮೆರಿಕದೊಂದಿಗೆ ನಡೆಯುತ್ತಿರುವ ಸಂಘರ್ಷದ ನಡುವೆಯೂ ಕದನ ವಿರಾಮವನ್ನು ಬಯಸುವುದಿಲ್ಲ ಮತ್ತು ಯಾವುದೇ ಮಾತುಕತೆಗೂ ಮುಂದಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.


ಅಮೆರಿಕದ 'CBS ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಅಬ್ಬಾಸ್ ಅರಘ್ಚಿ ಅವರು, "ದೇಶವು ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ನಿರಂತರವಾಗಿ ಮುಂದುವರಿಸಲಿದೆ.

ನಾವು ಎಂದಿಗೂ ಕದನ ವಿರಾಮವನ್ನು ಕೇಳಿಲ್ಲ. ಮಾತುಕತೆಗೂ ಮುಂದಾಗಿಲ್ಲ. ಅಗತ್ಯವಿರುವಷ್ಟು ಕಾಲ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಿದ್ಧರಾಗಿದ್ದೇವೆ. ಈಗಲೂ ಅದನ್ನೇ ಮಾಡುತ್ತಿದ್ದೇವೆ. ಈ ಯುದ್ಧವು ಯಾವುದೇ ವಿಜಯವಿಲ್ಲದ, ಕಾನೂನುಬಾಹಿರ ಸಂಘರ್ಷ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರ್ಥಮಾಡಿಕೊಳ್ಳುವವರೆಗೂ ನಾವು ಇದನ್ನು ಮುಂದುವರಿಸುತ್ತೇವೆ," ಎಂದು ಹೇಳಿದರು.

"ಅಧ್ಯಕ್ಷ ಟ್ರಂಪ್ ಮನರಂಜನೆಗಾಗಿ ಯುದ್ಧ ನಡೆಸುತ್ತಿರುವಂತಿದೆ. ಇದರ ಪರಿಣಾಮವಾಗಿ ನಿರಪರಾಧಿ ಜನರು ಸಾವಿಗೀಡಾಗುತ್ತಿದ್ದಾರೆ. ಇದು, ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕ ಹಡಗುಗಳನ್ನು ಗುರಿಯಾಗಿಸುವ ಕ್ರಮಗಳನ್ನು ಆಯ್ಕೆ ಮಾಡಿಕೊಂಡ ಯುದ್ಧ", ಎಂದು ಆರೋಪಿಸಿದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries