HEALTH TIPS

ಅಮೆರಿಕ ಜೊತೆ ಮಾತುಕತೆ ನಡೆಸುವ ಯಾವುದೇ ಉದ್ದೇಶ ಇರಾನ್‌ಗೆ ಇಲ್ಲ: ವಿದೇಶಾಂಗ ಸಚಿವ

ಟೆಹರಾನ್: ಅಮೆರಿಕದ ಜೊತೆ ಮಾತುಕತೆ ನಡೆಸುವ ಯಾವುದೇ ಉದ್ದೇಶ ಇರಾನ್‌ಗೆ ಇಲ್ಲ ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. 


ಯುದ್ಧ ಅಂತ್ಯಕ್ಕೆ ಅಮೆರಿಕದ ಪ್ರಸ್ತಾವನೆಗಳನ್ನು ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಧ್ಯವರ್ತಿಗಳ ಮೂಲಕ ಸಂದೇಶ ವಿನಿಮಯವಾದ ಮಾತ್ರಕ್ಕೆ ಅಮೆರಿಕದ ಜೊತೆ ಸಂಧಾನ ಮಾತುಕತೆ ನಡೆಯುತ್ತಿದೆ ಎಂದು ಅರ್ಥವಲ್ಲ ಎಂದಿದ್ದಾರೆ.

ಇರಾನ್‌ನ ಸರ್ಕಾರಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಮೆರಿಕದ ಜೊತೆ ಮಾತುಕತೆ ನಡೆಸುವ ಯಾವುದೇ ಉದ್ದೇಶ ಇರಾನ್‌ಗೆ ಇಲ್ಲ ಎಂದಿದ್ದಾರೆ.

'ವಿಭಿನ್ನ ಮಧ್ಯವರ್ತಿಗಳ ಮೂಲಕ ಸಂದೇಶಗಳನ್ನು ಕಳುಹಿಸುತ್ತಿರುವ ಅಮೆರಿಕದೊಂದಿಗೆ ಯಾವುದೇ ಮಾತುಕತೆಗಳಿಲ್ಲ. ಮಧ್ಯವರ್ತಿಗಳ ಮೂಲಕ ಸಂದೇಶಗಳ ವಿನಿಮಯ ಎಂದರೆ ಅಮೆರಿಕದೊಂದಿಗೆ ಮಾತುಕತೆ ಎಂದರ್ಥವಲ್ಲ' ಎಂದು ಅರಾಘ್ಚಿ ಹೇಳಿದ್ದಾರೆ.

'ಪ್ರತಿರೋಧವನ್ನು ಮುಂದುವರಿಸುವುದು ಪ್ರಸ್ತುತ ನಮ್ಮ ನೀತಿಯಾಗಿದೆ. ಇಲ್ಲಿವರೆಗೆ, ಯಾವುದೇ ಮಾತುಕತೆಗಳು ನಡೆದಿಲ್ಲ. ನಡೆಯುತ್ತಲೂ ಇಲ್ಲ' ಎಂದು ಹೇಳಿದ್ದಾರೆ.

ಇರಾನ್‌ನ ಮಿಲಿಟರಿ ಮಿಲಿಟರಿಯ ಪ್ರತಿಕ್ರಿಯೆಯ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವರು, ಪ್ರತೀಕಾರದ ಕಾರ್ಯಾಚರಣೆಗಳು ದೇಶದ 'ಸುವರ್ಣ ಕ್ಷಣ' ಎಂದು ಬಣ್ಣಿಸಿದರು. ಎರಡು ಪರಮಾಣು ಶಸ್ತ್ರಸಜ್ಜಿತ ಆಕ್ರಮಣಕಾರರು ತಮ್ಮ ದುರುದ್ದೇಶ ಸಾಧಿಸುವುದನ್ನು ದೇಶ ತಡೆದಿದೆ ಎಂದು ಹೇಳಿದ್ದಾರೆ.

ಈಗ ಮಾತುಕತೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅದು ಸೋಲಿನ ಸ್ವೀಕಾರವಾಗಿದೆ. ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಮಾತುಕತೆಗಾಗಿ ಏಕೆ ಸಜ್ಜುಗೊಳಿಸುತ್ತಿದ್ದಾರೆ? ಎಂದು ಅರಾಘ್ಚಿ ಟಿವಿ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.

ಈ ಮಧ್ಯೆ ಎನ್‌ಆರ್‌ಸಿಸಿ ವಾರ್ಷಿಕ ನಿಧಿ ಸಂಗ್ರಹಣೆ ಭೋಜನ ಕೂಟದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ನಾವು 8 ಯುದ್ಧಗಳನ್ನು ಅಂತ್ಯಗೊಳಿಸಿದ್ದೇವೆ. ಇನ್ನೊಂದನ್ನು ಗೆಲ್ಲುತ್ತಿದ್ದೇವೆ. ಇರಾನ್‌ನೊಂದಿಗೆ ಸಂಧಾನ ಮಾತುಕತೆ ನಡೆಸುತ್ತಿದ್ದೇವೆ. ಅವರು ಒಪ್ಪಂದಕ್ಕಾಗಿ ಹಪಾಹಪಿಸುತ್ತಿದ್ದಾರೆ. ತಮ್ಮ ಜನರೇ ತಮ್ಮನ್ನು ಕೊಲ್ಲಬಹುದು ಎಂಬ ಭಯದಿಂದ ಬಹಿರಂಗವಾಗಿ ಹೇಳಲು ಹೆದರುತ್ತಿದ್ದಾರೆ' ಎಂದಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries