ನವದೆಹಲಿ: ಶಾಲಾ ದಿನದಲ್ಲೇ ನಾವು ದೇಶ ಭಕ್ತಿಗೀತೆ, ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಆರಂಭಿಸುತ್ತವೆ. ಅದರಲ್ಲೂ ಶಾಲೆ ಆರಂಭವಾಗುವ ಮೊದಲು ಮಕ್ಕಳು ಶಿಸ್ತಿನಿಂದ ಬೆಳಗ್ಗೆ ಪ್ರಾರ್ಥನೆಯಲ್ಲಿ ಕಡ್ಡಾಯ ಪಾಲ್ಗೊಳ್ಳಬೇಕು ಎಂಬ ನಿಯಮವು ಇದೆ. ಅಂತೆಯೇ ಕ್ಯಾಂಪಸ್‌ನಲ್ಲಿ ರಾಷ್ಟ್ರಗೀತೆ ಪ್ರಾರಂಭ ಆದ್ದಂತೆ ಬಾಲಕನೊಬ್ಬ ಓಟದ ಮಧ್ಯದಲ್ಲಿಯೇ ಗೌರವ ಸಲ್ಲಿಸಿರುವ ದೃಶ್ಯ ಕಂಡುಬಂದಿದೆ.
ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
ಮಕ್ಕಳು ಶಾಲಾ ಮೈದಾನದಾದ್ಯಂತ ಆಟವಾಡುತ್ತಿದ್ದರು, ಆಗ ರಾಷ್ಟ್ರ ಗೀತೆ ಸ್ಪೀಕರ್‌ಗಳಲ್ಲಿ ಪ್ರತಿಧ್ವನಿಸಿದೆ. ಶಾಲೆಯ ಶಿಸ್ತಿನಂತೆ ಎಲ್ಲಾ ವಿದ್ಯಾರ್ಥಿಗಳು ಇದ್ದಲ್ಲೇ ನಿಂತು ಗೌರವ ಸಲ್ಲಿಸಿದ್ದಾರೆ. ಆದರೆ ಬಾಲಕನೊಬ್ಬ ಓಡುತ್ತಿದ್ದಂತೆ ಓಟದ ಭಂಗಿಯಲ್ಲೇ ದೇಹ ಮುಂದೆ ಬಾಗಿರುವ ಸ್ಥಿತಿಯಲ್ಲೇ ನಿಂತುಬಿಟ್ಟಿದ್ದಾನೆ.
ವಿಡಿಯೊ ನೋಡಿ:
ರಾಷ್ಟ್ರಗೀತೆ ಮುಗಿಯವರೆಗೂ ಬಾಲಕ ಆತ ಅದೇ ಭಂಗಿಯಲ್ಲಿ ನಿಂತಿರುವುದು ವಿಡಿಯೊದಲ್ಲಿ ಕಾಣಬಹುದು. ತನ್ನ ಭಂಗಿಯನ್ನು ಯಾವುದೇ ರೀತಿ ಬದಲಾಯಿಸದೆ ನಿಂತು ಬಿಟ್ಟಿದ್ದಾನೆ. ಕೈಗಳನ್ನು ಓಡುವ ಸ್ಥಿತಿಯಲ್ಲೇ ಬಿಗಿಹಿಡಿದು ಒಂದು ಕಾಲನ್ನು ಮುಂದಕ್ಕೆ ಬಾಗಿಯೇ ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದಾನೆ. ಈ ಘಟನೆಯ ವಿಡಿಯೊ ವ್ಯಾಪಕವಾಗಿ ಮೆಚ್ಚುಗೆ ಗಳಿಸಿದೆ.

