ಕಾಸರಗೋಡು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಸುಮಾರು ಎರಡೂಕಾಳು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಸಂತ ಪೂಜಾ ಕಾರ್ಯಕ್ರಮಗಳ ಉದ್ಘಾಟನೆ, ಶ್ರೀ ದೇವರಿಗೆ ಸ್ವರ್ಣದ ಕೈಬಟ್ಟಲು ಹಾಗೂ ಕಲಶಪಾತ್ರೆ ಸಮರ್ಪಣೆ ಶ್ರೀಕ್ಷೇತ್ರದಲ್ಲಿ ನೆರವೇರಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾಂಗಾರಿಗಳನ್ನು ಉದ್ಘಾಟಿಸಿ ಆಶೀರ್ವಚನ ನಿಡಿದರು.
ದೇವಸ್ಥಾನ ವಠಾರದಲ್ಲಿ 1.12ಕೋಟಿ ರಊ. ವಎಚ್ಚದಲ್ಲಿ ನಿರ್ಮಿಸಿದ ಬೊಡ್ಡಜ್ಜ ವಾಣಿಜ್ಯ ಸಂಕೀರ್ಣ, ಲಾಕರ್ ಕೊಠಡಿ, ಶೌಚಗೃಹ ಕಾಂಪ್ಲೆಕ್ಸ್, ಒಂದು ಕೋಟಿಗೂಹೆಚ್ಚು ಮೊತ್ತದಲ್ಲಿ ದೇಗುಲದ ಹೊರಾಂಗಣದಲ್ಲಿ ನಿರ್ಮಿಸಿದ ಶಾಶ್ವತ ಚಪ್ಪರ ಲೋಕಾರ್ಪಣೆ ನಡೆಯಿತು. ಇದೇ ಸಂದರ್ಭ ಕಳೆದ ನಾಲ್ಕು ದಶಕಗಳಿಂದ ಭಕ್ತಾದಿಗಳು ದೇವಾಲಯಕ್ಕೆ ಕಾಣಿಕೆಯಾಗಿ ಸಮರ್ಪಿಸಿದ್ದ ಚಿನ್ನವನ್ನು ಶುದ್ಧೀಕರಿಸಿ ತಯಾರಿಸಲಾದ 089ಗ್ರಾಂ ತೂಕದ ಚಿನ್ನದ ಕಲಶ ಹಾಗೂ 700ಗ್ರಾಂ ತೂಕದ ಸ್ವರ್ಣದ ಕೈಬಟ್ಟಲು ಶ್ರೀದೇವರಿಗೆ ಸಮರ್ಪಿಸಲಾಯಿತು. ಇದರ ಒಟ್ಟು ಮೌಲ್ಯ 2.60ಕೋಟಿ ರೂ. ಅಂದಾಜಿಸಲಾಗಿದೆ. ಎಡನೀರುಶ್ರೀಗಳು ಶ್ರೀಕ್ಷೇತ್ರದ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಅವರಿಗೆ ಹಸ್ತಂತರಿಸಿದರು.
ಮಧೂರು ಗ್ರಾಪಂ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಪವಿತ್ರಪಾಣಿ ರತನ್‍ಕುಮಾರ್ ಕಾಮಡ, ಗ್ರಾಪಂ ಸದಸ್ಯ ಎಂ.ಆರ್ ಯೋಗೀಶ್, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್ ಕೂಡ್ಲು, ವಿಷ್ಣು ಪ್ರಸಾದ್ ಹೆಬ್ಬಾರ್, ಜಯದೇವ ಖಂಡಿಗೆ, ಪ್ರಭಾಶಂಕರ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಗುಡ್ಡೆ ಶ್ರೀ ಮಹಾಲಿಂಗೇಶ್ವರ ಭಜನಾಸಂಘದ ವತಿಯಿಂದ ಭಜನೆ ನಡೆಯಿತು.



